ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 1 Jan 2014, 11:18 am

6 ರಿಂದ ಪೂರಕ ಪರೀಕ್ಷೆ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಬಿ.ಇಡಿ ಪ್ರಥಮ ಸೆಮಿಸ್ಟರ್ ಪೂರಕ ಪರೀಕ್ಷೆಗಳು ಜ. 6 ರಿಂದ ಆರಂಭವಾಗಲಿವೆ. ತುಮಕೂರಿನ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜನ್ನು ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಪರೀಕ್ಷಾ ವೇಳಾಪಟ್ಟಿಯನ್ನು ಅಭ್ಯರ್ಥಿಗಳು ಸಂಬಂಧಪಟ್ಟ ಕಾಲೇಜುಗಳಿಂದ ಪಡೆದುಕೊಳ್ಳಬಹುದು ಎಂದು ಕುಲಸಚಿವರು ತಿಳಿಸಿದ್ದಾರೆ.
ಶಾಲಾ ಕಟ್ಟಡ ಉದ್ಘಾಟನೆ
ತಿಪಟೂರು: ತಾಲೂಕಿನ ಶಿವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ ನೆರವೇರಿಸಿದರು.  ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಬಸವರಾಜು, ಜಿ.ಪಂ.ಸದಸ್ಯ ತ್ರಿಯಂಬಕ, ಮಾಜಿ ಶಾಸಕರಾದ ಬಿ.ಸಿ.ನಾಗೇಶ್, ಬಿ.ನಂಜಾಮರಿ, ಕ್ಷೇತ್ರಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮತ್ತಿತರರಿದ್ದರು.  ಮುಖ್ಯ ಶಿಕ್ಷಕ ಘನಾನಂದಮೂರ್ತಿ ಸ್ವಾಗತಿಸಿ, ಸಹ ಶಿಕ್ಷಕ ಸಿದ್ದಪ್ಪವಾಲಿಮರದ್ ನಿರೂಪಿಸಿ, ಶಿಕ್ಷಣ ಸಂಯೋಜಕ ಕೋಡಾಚಾರ್ಯ ವಂದಿಸಿದರು.
ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸಿ: ಸಾಹಿತಿ
ತುಮಕೂರು: ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಾಹಿತಿ ಪ್ರೊ. ಶಂಕರಗೌಡ. ಮ. ಬಿರಾದರ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೆ.ಡಿ. ಸ್ಕೂಲ್ ಆಫ್ ಆರ್ಟ್ ಆಶ್ರಯದಲ್ಲಿ ನಗರದ ಶೆಟ್ಟಿಹಳ್ಳಿ ಗೇಟ್ ಬಳಿಯಿರುವ ಜೆ.ಡಿ. ಚಿತ್ರಶಾಲೆ ಆವರಣದಲ್ಲಿ  ಯುವ ಸೌರಭ ಕಾರ್ಯಕ್ರಮ ಹಾಗೂ ಹಸಿರುಕ್ರಾಂತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳಲ್ಲಿ ಪ್ರತಿಭೆ ಇರುತ್ತೆ. ಅದನ್ನು ಬೆಳಕಿಗೆ ತರುವ ಕೆಲಸ ಮಾರ್ಗದರ್ಶಕರಾದ ನಾವು ಮಾಡಬೇಕಾಗಿದೆ ಅಂತಹ ಒಂದು ಪ್ರಯತ್ನ ಹಸಿರುಕ್ರಾಂತಿ ಚಿತ್ರದುರ್ಗದಲ್ಲಿ ನಡೆದಿದೆ ಎಂದರು. ಅಧ್ಯಕ್ಷತೆ ವಹಿಸಿದ ಎನ್. ನಾಗಪ್ಪನವರು ಮಾತನಾಡಿ ಮಾಧ್ಯಮಗಳ ಪಾಶ್ಚಾತ್ಯ ಸಂಸ್ಕೃತಿಗಳಿಗೆ ಒತ್ತುಕೊಡುವ ಪ್ರಯತ್ನ ಮಾಡುತ್ತಿರುವುದರಿಂದ ನಮ್ಮ ನಾಡಿನ ಕಲೆ, ಸಂಸ್ಕೃತಿಗೆ ಧಕ್ಕೆಯಾಗಿದೆ. ನಮ್ಮ ಮಕ್ಕಳೂ ಅದನ್ನು ಅನುಸರಿಸುವಂತಾಗಿದೆ. ಇಂದು ಗುರುಹಿರಿಯರನ್ನು ಕಡೆಗಣಿಸುವ ಪರಿಸ್ಥಿತಿ ಒದಗಿಬರುತ್ತದೆ. ಮಕ್ಕಳು, ತಂದೆ, ತಾಯಿ ಗುರುಹಿರಿಯರಿಗೆ ವಿಧೇಯಕರಾಗಿ ನಡೆದುಕೊಳ್ಳುವುದೇ ನಮ್ಮ ನಾಡಿನ ಸಂಸ್ಕೃತಿ. ಈ ವಿಷಯದಲ್ಲಿ ಮಕ್ಕಳಾದ ನೀವುಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ  ಕುಂ.ಸಿ. ಸದಾಶಿವಯ್ಯ ಗೌರವ ಕಾರ್ಯದರ್ಶಿ ಸತೀಶ್ ಹೆಬ್ಬಾಕ, ಜೆ.ಡಿ.ಚಿತ್ರಕಲೆಯ ಪ್ರಾಚಾರ್ಯ ಕಲಾವಿದ ಡೇವಿಡ್ ಉಪಸ್ಥಿತರಿದ್ದರು. ರಮ್ಯರವರಿಂದ ಕೊಳಲು ವಾದನ, ನಾಗರಾಜು ತಂಡದವರಿಂದ ಜಾನಪದ ನೃತ್ಯ ಹಾಗೂ ಲಾವಣಿ ಕೆಂಪಯ್ಯರವರಿಂದ ಲಾವಣಿ ಗೀತೆಗಳ ಕಾರ್ಯಕ್ರಮ ನಡೆಯಿತು. ನಿಶ್ಚಿತ, ರಕ್ಷಾ ಪ್ರಾರ್ಥಿಸಿದರು. ಪೂಜಾ ನಿರೂಪಿಸಿ ಸ್ವಾಗತಿಸಿದರು. ದೀಕ್ಷಾ ವಂದಿಸಿದರು.
ನರಸಿಂಹರಾಜು ಅಧ್ಯಕ್ಷರಾಗಿ ಆಯ್ಕೆ
ಶಿರಾ: ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರನ್ನಾಗಿ ಶಿರಾ ತಾಲೂಕು ಹನುಮನಹಳ್ಳಿ ಶಾಲೆಯ ನರಸಿಂಹರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಹಾಲಿ ಅಧ್ಯಕ್ಷ ಪುಟ್ಟರಾಜು ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಸಭೆ ಸೇರಿದ ಪದಾಧಿಕಾರಿಗಳು ಅಧ್ಯಕ್ಷರಾದ ಪುಟ್ಟರಾಜು ಅವರು ಸ್ವಯಂ ನಿವೃತ್ತಿಯಿಂದ ತೆರಳುವ ನಿಮಿತ್ತ ಖಾಲಿಯಾದ ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ನರಸಿಂಹರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಹಾಲಿ ಉಪಾಧ್ಯಕ್ಷರಾಗಿದ್ದ ನರಸಿಂಹರಾಜು ಅವರ ಸ್ಥಾನಕ್ಕೆ ಐ.ಡಿ. ಹಳ್ಳಿ ಶಾಲೆಯ ಸಂಜಯ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement