ಸ್ವ ಪ್ರೇರಣೆಯಿಂದ ರಕ್ತದಾನ ಮಾಡಿ: ಸಚಿವ
ಶಿರಾ : ಯುವಕರು ಸ್ವ ಪ್ರೇರಣೆಯಿಂದ ರಕ್ತದಾನ ಮಾಡುವುದರಿಂದ ಇತರರ ಜೀವ ಉಳಿಸಿದಂತಾಗುತ್ತದೆ. ಅಪಘಾತಗಳು ಸಂಭವಿಸಿದಾಗ ಆಗುವ ಎಷ್ಟೋ ಸಾವು - ನೋವುಗಳಿಗೆ ಅಗತ್ಯವಾಗುವ ರಕ್ತದಾನ ಎಷ್ಟೋ ಜೀವಗಳನ್ನು ಉಳಿಸುತ್ತದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದರು.
ಅವರು ನಗರದ ರಂಗನಾಥನಗರದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ನವೋದಯ ಯುವ ವೇದಿಕೆ ಮತ್ತು ಸಾರ್ವಜನಿಕ ಆಸ್ಪತ್ರೆ, ಶಿರಾ ಹಾಗೂ ಜಿಲ್ಲಾ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕು. ನವೋದಯ ಯುವ ವೇದಿಕೆಯ ಇಂತಹ ಒಳ್ಳೆಯ ಕಾರ್ಯಕ್ರಮಗಳು ನಡೆಯುತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ಜಯರಾಮಕೃಷ್ಣ, ನಗರಸಭಾ ಸದಸ್ಯ ಬಸವರಾಜು, ಹಿಂದುಳಿದ ಕಾಂಗ್ರೆಸ್ ಘಟಕ ಅಧ್ಯಕ್ಷರಾದ ಭಾನುಪ್ರಕಾಶ್, ಜಿಲ್ಲಾ ರಕ್ತ ನಿಧಿ ಕೇಂದ್ರದ ಡಿ.ಎಂ. ಗೌಡ, ತಾಲೂಕು ವೈದ್ಯಾಧಿಕಾರಿ ಮುಬಾರಕ್, ಜಿ.ಪಂ. ಸದಸ್ಯ ಅರೆಹಳ್ಳಿ ರಮೇಶ್, ಡಿ.ಸಿ.ಅಶೋಕ್, ನೂರುದ್ದೀನ್, ನಗರಸಭಾ ಸದಸ್ಯ ನಟರಾಜು, ಪಿ.ಎಸ್.ಐ. ಕೋಟ್ರೇಶ್, ರಮೇಶ್, ಮತ್ತತರರು ಹಾಜರಿದ್ದರು.