ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಡುಗೆ ಅನಿಲ ವಿತರಣೆ ನೀತಿ ಖಂಡಿಸಿ ಪ್ರತಿಭಟನೆ

Mainashree
Updated On : 2 Jan 2014, 10:29 am

ತುಮಕೂರು: ಅಡುಗೆ ಅನಿಲ ವಿತರಣೆ ನೀತಿ ಖಂಡಿಸಿ ತುಮಕೂರಿನಲ್ಲಿ ಜಿಲ್ಲಾ ಮಹಿಳಾ ಸಂರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ತುಮಕೂರಿನ ಟೌನ್‌ಹಾಲ್ ಮುಂದೆ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಹಿಂದಿನ ವರ್ಷದವರೆಗೂ ಗ್ಯಾಸ್ ಸಿಲಿಂಡರ್‌ಗೆ 300 ರು.ನಿಂದ 400 ಇತ್ತು. ಗೃಹಿಣಿಯರು ಹೇಗೋ ಹಣ ಹೊಂದಿಸಿಕೊಂಡು ಸಿಲಿಂಡರ್ ಪಡೆಯುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಆಧಾರ್ ಅನಾಹುತ  ಮಾಡಿಬಿಟ್ಟಿತು. ಇದರಿಂದ ನೇರ ಸಬ್ಸಿಡಿ ಹೆಸರಲ್ಲಿ ಆಧಾರ್ ನೋಂದಣಿ, ಬ್ಯಾಂಕ್ ಖಾತೆ, ಆಧಾರ್ ಲಿಂಕ್ ಎಂದು 1 ವರ್ಷಗಳ ಕಾಲ ಸತಾಯಿಸಲಾಯಿತು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಂತರ 1080 ರು.ಗಳನ್ನು ಹೊಂದಿಸಿ ಗ್ಯಾಸ್ ಪಡೆಯಿರಿ. ನಂತರ 580 ರು.ಗಳನ್ನು ನಿಮ್ಮ ಖಾತೆಗೆ  ಹಾಕುತ್ತೇವೆ ಎಂಬ ವಿಚಿತ್ರ ನೀತಿಯನ್ನು ಕೇಂದ್ರ ಸರ್ಕಾರ ಅಳವಡಿಸಿತ್ತು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 400 ರು. ಹೊಂದಿಸಲು ಹೆಣಗುವ ಬಡ-ಮಧ್ಯಮ ವರ್ಗಗಳ ಕಷ್ಟಗಳು ಸರ್ಕಾರಕ್ಕೆ ಗೊತ್ತಿಲ್ಲವೇ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇಂತಹ ನೀತಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗಿ ಬಂದಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಇದರ ಬದಲು ಹಿಂದಿನ ರೀತಿಯೇ ಸಬ್ಸಿಡಿಯನ್ನು ಗ್ಯಾಸ್ ಕಂಪನಿಗೆ ನೀಡಿ ಗ್ರಾಹಕರಿಂದ ಮೂಲಧನ ಅಂದರೆ ಸಬ್ಸಿಡಿಯನ್ನು ಬಿಟ್ಟು 400 ರು. ನೀಡುವ ಹಿಂದಿನ ಪದ್ಧತಿಗೆ ಒತ್ತಾಯಿಸಿ ಈ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.
ಇಷ್ಟೆ ಅಲ್ಲದೇ ಹೊಸ ವರ್ಷದ ಕೊಡುಗೆಯಾಗಿ ಮತ್ತೆ ಅನಿಲ ಸಿಲಿಂಡರ್ ಅನ್ನು ಏರಿಸಲಾಗಿದೆ. ಇದರ ವಿರುದ್ಧವೂ ಹೋರಾಟ ರೂಪಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement