ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗುರುವಿನ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಅತ್ಯಗತ್ಯ

Mainashree
Updated On : 2 Jan 2014, 10:27 am

ಹುಳಿಯಾರು : ಅತಿ ವೇಗದಲ್ಲಿ ಬೆಳೆಯುತ್ತಿರುವ ಯಾಂತ್ರಿಕ ಪ್ರಪಂಚದಲ್ಲಿ ಪ್ರತಿ ಕ್ಷೇತ್ರ ಪೈಪೋಟಿಯುತವಾಗಿರುವುದರಿಂದ ವಿದ್ಯಾರ್ಥಿಗಳು ಹೆಚ್ಚು ಅಭ್ಯಾಸ ಮಾಡುವ ಮೂಲಕ ಮುನ್ನಡೆಯಬೇಕಿದೆ. ಆದ್ದರಿಂದ ಕಲಿಕಾ ಸಮಯದಲ್ಲಿ ಗುರುಗಳು ತಿಳಿಸುವ ಪಠ್ಯದ ವಿಷಯಗಳನ್ನು ಅರಿತು, ಅವರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಜೀವನದಲ್ಲಿ ಯಶಸ್ಸು ಪಡೆಯುವಂತೆ ಸಾಹಿತಿ ಡಾ.ಅಬ್ದುಲ್ ಅಮೀದ್ ಕಿವಿಮಾತು ಹೇಳಿದರು.
 ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 2013-14ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
 ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ  ಇತರ ಯಾವುದೇ ಕಾರ್ಯಚಟುವಟಿಕೆಗಳಿಗೆ ತಮ್ಮ ಮನಸ್ಸನ್ನು ಹರಿಯಬಿಡದೆ, ಸದಾಕಾಲ ಅಭ್ಯಾಸದಲ್ಲಿ ನಿರತರಾದಾಗ ಮಾತ್ರ ತಾವು ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ ಎಂದರು.
ಅಂತೆಯೇ  ಮಾನವನ ಜೀವನದಲ್ಲಿ ಬರುವ ಸಂಬಂಧಗಳಲ್ಲಿ ಗುರು-ಶಿಷ್ಯರ ಸಂಬಂಧಕ್ಕೆ ತನ್ನದೆ ಆದ ಸ್ಥಾನವಿದ್ದು, ವಿದ್ಯಾರ್ಥಿಗಳು ಗುರುಗಳು ಹೇಳಿದ ಮಾತುಗಳನ್ನು, ಪಠ್ಯದ ವಿಷಗಳನ್ನು ಸೂಕ್ತವಾಗಿ ಅರಿಯಬೇಕು, ಗುರುಗಳು ನೀಡುವ ಶಿಕ್ಷೆಯನ್ನು ದ್ವೇಷ ಮನೋಭಾವದಿಂದ ಕಾಣದೆ ಅವರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲ ಡಿ.ಇಂದಿರಾ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸಿದಾಗ ಓದಲು ಮುಂದಾಗುವ ಬದಲು ಅಂದಿನ ಪಾಠಗಳನ್ನು ನಿತ್ಯ ಅಭ್ಯಸಿಸಿ ಮನದಟ್ಟು ಮಾಡಿಕೊಳ್ಳಬೇಕು, ಆಗ ಪರೀಕ್ಷೆಯ ಬಗ್ಗೆ ಯಾವುದೇ ಭಯವಿಲ್ಲದೆ, ಉತ್ತಮ ಅಂಕಗಳನ್ನು ಗಳಿಸಬಹುದು ಎಂದರು.
ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ, ಜಿ.ಪಂ.ಸದಸ್ಯೆ ಮಂಜುಳಾ ಮಾತನಾಡಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ
ಲತಾ, ಶೌಕತ್, ಪುಟ್ಟಯ್ಯ, ರಿಯಾಜ್, ಜಲಾಲ್ ಸಾಬ್, ದೈಹಿಕ ಶಿಕ್ಷಕ ಮನ್ಸೂರ್ ಅಹಮ್ಮದ್ ಪಾಲ್ಗೊಂಡಿದ್ದರು. ಪ್ರೇಮ ಪ್ರಾರ್ಥಿಸಿ, ರಾಜಣ್ಣ ಸ್ವಾಗತಿಸಿ, ವಿಜಯಲಕ್ಷ್ಮಿ ಶಾಲಾ ವರದಿಯನ್ನು ವಾಚಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement