ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೂಲ ಸವಲತ್ತು ವಂಚಿತವಾದಲ್ಲಿ ಮಾನವ ಹಕ್ಕು ಉಲ್ಲಂಘನೆ

Mainashree
Updated On : 2 Jan 2014, 10:26 am

ಗುಬ್ಬಿ: ಜನಸಾಮಾನ್ಯರ ಕನಿಷ್ಠ ಮೂಲಭೂತ ಸವಲತ್ತು ವಂಚಿತವಾದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್. ಸದಾಶಿವಯ್ಯ ತಿಳಿಸಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸವಲತ್ತು ನೀಡಬೇಕಾದ ಸರ್ಕಾರ ಪ್ರತಿ ಪ್ರಜೆಯ ಹಿತ ಕಾಯಬೇಕು. ನಾಗರಿಕರಲ್ಲಿ ನೆಮ್ಮದಿಯ ಬದುಕು ರೂಪಿಸುವ ಆಶಯದಲ್ಲಿ ರಚಿತವಾದ ಸಂವಿಧಾನಕ್ಕೆ ದಕ್ಕೆಯಾಗುವುದು ಮಾನವ ಹಕ್ಕು ಧಿಕ್ಕರಿಸದಂತಾಗುತ್ತದೆ. ಈ ನಿಟ್ಟಿನಲ್ಲಿ ಈ ಹಕ್ಕು ಪ್ರತಿಪಾದಿಸಲು ಎಲ್ಲರೂ ಪ್ರಜ್ಞಾವಂತರಾಗಬೇಕು ಎಂದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪ್ರಹ್ಲಾದ್ ಕಟ್ಟಮನಿ ಮಾತನಾಡಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವ ಅನಿವಾರ್ಯ ಎದುರಾಗಿದೆ. ಅಮಾನವೀಯ ನಡವಳಿಕೆಯಲ್ಲಿ ಈ ಹಕ್ಕು ಉಲ್ಲಂಘನೆ ಸಹಜವಾಗಿ ನಡೆದು ಹೋಗುತ್ತಿದೆ. ವ್ಯಕ್ತಿಗತವಾಗಿ ದೌರ್ಜನ್ಯ ನಡೆದಲ್ಲಿ ಅಲ್ಲೂ ಸಹ ಹಕ್ಕು ಪ್ರತಿಪಾದನೆ ಆಗುತ್ತದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಕೆ.ಉಮೇಶ್ ಮಾತನಾಡಿ ಸ್ವತಂತ್ರ ಜೀವನಕ್ಕೆ ಅಡ್ಡಿಪಡಿಸುವುದು ಸೇರಿದಂತೆ ಕಟ್ಟಪಾಡುಗಳನ್ನು ಮೀರಿದ ವರ್ತನೆ ಮಾನವ ಹಕ್ಕು ಉಲ್ಲಂಘನೆ ಎನಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಈ ಹಕ್ಕುಗಳ ಬಗ್ಗೆ ಸಾಮಾನ್ಯ ಅರಿವು ಪ್ರತಿಯೊಬ್ಬರಲ್ಲೂ ಅವಶ್ಯ. ಹಕ್ಕು ಮಾನ್ಯತೆ ಪಡೆದರೆ ಆರೋಗ್ಯಪೂರ್ಣ, ಶಾಂತಿ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಡಿ.ಮಂಜುನಾಥ್, ವಕೀಲರಾದ ಮೋಹನ್, ಜ್ಯೋತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement