ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 3 Jan 2014, 11:36 am

'ಶುದ್ಧ ನೀರು ಪೂರೈಕೆ ಕಾಮಗಾರಿ ಪ್ರಗತಿ'
ಪಾವಗಡ: ಫ್ಲೋರೈಡ್ ರಹಿತ ಶುದ್ಧ ನೀರು ಪೂರೈಕೆಗೆ ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ ಹಿನ್ನಲೆಯಲ್ಲಿ ಪ್ಲೋರೈಡ್ ರಹಿತ ಘಟ ಕಾಮಗಾರಿಗಳು ತಾಲೂಕಿನಲ್ಲಿ ಭರದಿಂದ ನಡೆಯುತ್ತಿವೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಪಾವಗಡ ನಾಗಭೂಷಣ್‌ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.ಙ ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಶುದ್ದ ಕುಡಿಯುವ ನೀರಿನ ಅನುಷ್ಠಾನದ ಬಗ್ಗೆ ಮೊದಲಿನಿಂದಲೂ 'ಕನ್ನಡಪ್ರಭ' ಆಸಕ್ತಿ ವಹಿಸಿ ವರದಿ ಮಾಡಿದೆ. ಫ್ಲೋರೈಡ್ ರಹಿತ ಕುಡಿಯುವ ನೀರು ಕುರಿತು ಸರ್ಕಾರಕ್ಕೆ ಹೈಕೋರ್ಟ್ ನೀಡಿದ ನಿರ್ದೇಶನ ಬಗ್ಗೆ ಪಂಚಾಯಿತಿ ರಾಜ್ಯ ಉಪ ಕಾರ್ಯದರ್ಶಿ ನೀಡಿದ ವರದಿ ನೋಡಿ ಹರ್ಷವಾಯಿತು  ಎಂದು ತಿಳಿಸಿದರು. ತಾಲೂಕಿನ ಬರೀ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಶುದ್ಧ ನೀರಿನ ಘಟಕಗಳು ಸ್ಥಾಪನೆ ಆದರೆ ಸಾಲದು ಶಾಲಾ,ಕಾಲೇಜ್ ಆಸ್ಪತ್ರೆಗಳು ಬಸ್ ನಿಲ್ದಾಣ ಸೇರಿದಂತೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಶುದ್ಧ ನೀರಿನ ಘಟಕಗಳು ಸ್ಥಾಪನೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ರಸಗೊಬ್ಬರ ತೆರಿಗೆ ವಿನಾಯ್ತಿಗೆ ಆಗ್ರಹ
ತಿಪಟೂರು: ರಾಜ್ಯದ ರೈತರು ವಿವಿಧ ಸಂಕಷ್ಟಗಳಿಂದ ನಿರೀಕ್ಷಿಸಿದ ಬೆಳೆ ಬಾರದಂತಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಇದರ ಜೊತೆಗೆ ಕೇಂದ್ರ ಸರ್ಕಾರ ಯೂರಿಯ ಹೊರತುಪಡಿಸಿ ಉಳಿದೆಲ್ಲಾ ಗ್ರೇಡ್‌ಗಳ ರಸಗೊಬ್ಬರಗಳ ದರ ನಿಗದಿ ಮೇಲಿನ ನಿಯಂತ್ರಣದಿಂದ ಹಿಂದಕ್ಕೆ ಸರಿದಿರುವ ಕಾರಣ ರಸಗೊಬ್ಬರಗಳ ಧರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರಿಂದಾಗಿ ಕೃಷಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ವೆಚ್ಚವು ಹೆಚ್ಚಾಗಿ ರೈತರ ನಿವ್ವಳ ಆದಾಯ ಕಡಿಮೆಯಾಗುತ್ತಿದ್ದು, ಈಗ ರೈತರ ವಿವಿಧ ಕೃಷಿ ಪರಿಕರಗಳ ಎಲ್ಲಾ ಮಾರಾಟದ ಹಂತದಲ್ಲಿ ವ್ಯಾಟ್ ತೆರಿಗೆ ಜಾರಿಗೊಳಿಸುವುದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಗುರಿ ಮಾಡಿದೆ. ಆದ್ದರಿಂದ ರಸಗೊಬ್ಬರ ಮತ್ತು ಕೃಷಿ ಉಪಕರಣಗಳ ಮೇಲೆ ವಿಧಿಸಿರುವ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕೆಂದು ತಾಲ್ಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಎಸ್.ಸದಾಶಿವಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರೈತರು ಬಳಸುವ ರಸಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣಗಳ ಮಾರಾಟದ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆಯನ್ನು ಸಂಪೂರ್ಣ ಮನ್ನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ  ಕೃಷ ್ಣ ಬೈರೇಗೌಡ, ಸ್ಥಳೀಯ ಶಾಸಕ ಕೆ.ಷಡಕ್ಷರಿ ಮತ್ತಿತರರಲ್ಲಿ  ಸದಾಶಿವಯ್ಯ ಮನವಿ ಮಾಡಿದ್ದಾರೆ.   

ರಂಭಾಪುರಿಶ್ರೀ ಧನುರ್ಮಾಸ ಇಷ್ಟಲಿಂಗ ಪೂಜೆ
ತುಮಕೂರು: ಧನುರ್ಮಾಸ ಇಷ್ಟಲಿಂಗ ಪೂಜೆಯ ಮುಖ್ಯ ಉದ್ದೇಶ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸುವುದೇ ಆಗಿದೆ ಎಂದು ರಂಭಾಪುರಿಶ್ರೀ ಅಭಿಪ್ರಾಯಪಟ್ಟರು.
ಅವರು ನಗರದಲ್ಲಿ 5 ದಿನಗಳ ಕಾಲ ವಿಶಾಲಾಕ್ಷಮ್ಮ ಸದಾಶಿವಯ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಬಾಳೆಹೊನ್ನುರು ಜಗದ್ಗುರು ಧನುರ್ಮಾಸ ಇಷ್ಟಲಿಂಗ ಮಹಾಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾರಂಭಕ್ಕಾಗಿ ಆಗಮಿಸಿದ ನಂತರ ಆಶೀರ್ವಚನ ನೀಡಿದರು. ಸಕಲರಿಗೂ ಧರ್ಮದ ಅಗತ್ಯ, ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಳ್ಳುವುದೆ ಈ ಕಾರ್ಯಕ್ರಮದ ಗುರಿ ಎಂದರು. ವೈಚಾರಿಕತೆ ಹೆಸರಿನಲ್ಲಿ ಧರ್ಮ, ಸಂಸ್ಕೃತಿ ಪರಂಪರೆಗೆ ಆತಂಕ ಸೃಷ್ಟಿಸುತ್ತಿರುವ ಜನರ ಕಡೆಗೆ ಜಾಗೃತರಾಗಿರಬೇಕೆಂದರು.
ಇದರ ನೇತೃತ್ವ ವಹಿಸಿದ್ದ ಸಿದ್ದರಬೆಟ್ಟ ರಂಭಾಪುರಿ ಶಾಖಾಮಠದ ವೀರಭದ್ರ ಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಶಾಸಕ, ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಸಿ ವೀರಭದ್ರಯ್ಯ, ಮುಖಂಡರಾದ ಜಗದೀಶ್ ಆರಾಧ್ಯ, ಬಿ.ಎಸ್. ಬಾಳಯ್ಯ, ಜಿ. ಹೆಚ್. ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement