ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಬ್ರಾಹ್ಮಣ ಸಂಘಟನೆ ವಿದ್ಯಾರ್ಥಿನಿಲಯ ಆರಂಭಿಸುವತ್ತ ಗಮನ ಹರಿಸಲಿ'

Mainashree
Updated On : 4 Jan 2014, 8:58 am

ಕ.ಪ್ರ.ವಾರ್ತೆ   ತುಮಕೂರು   ಜ.4
ಬ್ರಾಹ್ಮಣ ಸಂಘಟನೆಗಳು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯಗಳನ್ನು ಆರಂಭಿಸುತ್ತ ಹೆಚ್ಚಿನ ಗಮನ ಹರಿಬೇಕು ಎಂದು ವಿಪ್ರಸಂಘಟನೆ ಗಳಿಗೆ ಕಂಚಿ ಕಾಮಕೋಟಿ ಪೀಠಾಧಿಪತಿ ಜಯೇಂದ್ರ ಸರಸ್ವತಿ ಸ್ವಾಮಿಗಳು ಕರೆನೀಡಿದರು.  ನಗರದ ಶೃಂಗೇರಿ ಶಂಕರ ಮಠದ ಸಭಾಂಗಣದಲ್ಲಿ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ನಾಲ್ಕನೇ ವಾರ್ಷಿಕೋತ್ಸವ ಸಾನಿಧ್ಯ ವಹಿಸಿ ಮಾತನಾಡಿದರು.
ತಾವು ತಮ್ಮ ಗುರುಗಳ ಆಶಯದಂತೆ ಅವರ ಸೇವೆ ಮಾಡುತ್ತ ಅವರಿಂದ ಶಿಕ್ಷಣ ಪಡೆದ ಪರಿಣಾಮ ಇಂದು ಈ ಸ್ಥಿತಿಯಲ್ಲಿದ್ದೇನೆ. ಆದ್ದರಿಂದ ಮಕ್ಕಳು ಗುರು ಹಿರಿಯರಿಗೆ ಗೌರವ ನೀಡುತ್ತ ಶಿಕ್ಷಣ ಪಡೆಯುವಂತಾಗಬೇಕು ಎಂದರು. ತುಮಕೂರಿನ ವಿಪ್ರ ಸಮುದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿದ ಶ್ರೀಗಳು ಬ್ರಾಹಣರಿಗೆ ಆಧ್ಯಾತ್ಮಿಕ ಶಕ್ತಿ ನೀಡುವ ವೇದಾಧ್ಯಯನದ ಬಗ್ಗೆ ಸಂಘಟನೆಗಳು ಹೆಚ್ಚಿನ ಆಸಕ್ತಿ ನೀಡಬೇಕು ಎಂದು ಅವರು ಸಂಘಟನೆಗಳ ಮುಖ್ಯಸ್ಥರಿಗೆ ಸಲಹೆ ನೀಡಿದರು.
ವಿಪ್ರ ಸಂಘಟಣೆಗಳು ತಮ್ಮ ಶಕ್ತಿಯನ್ನು ಕೇವಲ ಸಮಾರಂಭಗಳನ್ನು ನಡೆಸುವುದಕ್ಕಾಗಿ ವ್ಯಯಿಸದೇ ಜಿಲ್ಲೆಯ ಎಲ್ಲಾ ಕಡೆ ವಿದ್ಯಾರ್ಥಿ ನಿಲಯಗಳನ್ನು ಶಾಲೆಗಳನ್ನು ಅದರಲ್ಲೂ ವೇದಾಧ್ಯಯನದ ಶಾಲೆಗಳನ್ನು ಆರಂಭಿಸುವ ಕಡೆ ಗಮನಹರಿಸಬೇಕು ಎಂದರು. ಕಂಚಿಕಾಮಕೋಟಿ ಪೀಠವು ಸಮಾಜದ ಅಭಿವೃದ್ಧಿಗಾಗಿ ಹಲವು ರೀತಿಯ ಜನೋಪಯೋಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿರುವುದಾಗಿ ಅವರು ತಿಳಿಸಿದರು. ಸಂಸ್ಕೃತ ಶಾಲೆಗಳು, ಆಸ್ಪತ್ರೆಗಳು, ಅನಾಥಾಲಯಗಳು, ವೃದ್ಧಾಶ್ರಮಗಳನ್ನು ರಾಷ್ಟ್ರದೆಲ್ಲೆಡೆ ಸ್ಥಾಪಿಸಲಾಗಿದೆ ಆದಿಶಂಕರರ ಬಹಳಷ್ಟು ಆಶಯವನ್ನು ತಾವು ಕಾರ್ಯರೂಪಕ್ಕೆ ತಂದಿರುವುದಾಗಿ ಎಂದು ಶ್ರೀಗಳು ತಿಳಿಸಿದರು.
ನಾಲ್ಕನೇ ವಾರ್ಷಿಕೋತ್ಸವ ಉದ್ಘಾಟಿಸಿದ ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟೀವ್ ಬ್ಯಾಂಕ್ ಸಂಸ್ಥಾಪಕರಾದ ಕೆ.ವಿ.ವೆಂಕಟನಾರಾಯಣ ಅವರು ಆಧಿಶಂಕರರ ಸಂದೇಶಗಳಿಗೆ ಮೂರ್ತರೂಪ ಕೊಟ್ಟವರು ಕಂಚಿ ಶ್ರೀಗಳು ಎಂದರು. ಬ್ರಾಹ್ಮಣ ಸಮುದಾಯ ತನ್ನ ಶಕ್ತಿಯನ್ನು ಅರಿತುಕೊಂಡು ಸ್ವಾವಲಂಭಿಗಳಾಗಬೇಕು,ಸರ್ಕಾರ ಮತ್ತು ಬೇರೊಬ್ಬರ ಬಳಿ ಕೈಯೊಡ್‌ಡುವ ಮನೋಭಾವದಿಂದ ಹೊರಬರಬೇಕು ಎಂದರು. ಉಪಪಂಗಡಗಳು ವೈರುಧ್ಯತೆಯಿಂದ ಹೊರಬಂದು ಎಲ್ಲರೂ ಒಂದೇ ಎಂಬ ಮನೋಭಾವ ಮೂಡಬೇಕು  ಎಂದರು.  ಡಾ.ತೀ.ನಂ. ಶಂಕರನಾರಾಯಣ, ಬಾಬು ಹಿರಿಯಣ್ಣಯ್ಯ, ಸಂತೇಬಾಚಹಳ್ಳಿ ಡಾ.ಎಸ್. ನಂಜುಂಡಸ್ವಾಮಿ, ಡಿ.ಎನ್. ವೆಂಕಟೇಶಮೂರ್ತಿ, ಸಿ.ವಿ. ಶ್ರೀನಿವಾಸಮೂರ್ತಿ, ಬುಕ್ಕಾಪಟ್ಟಣ ವಾಸು, ಬಿ.ಜೆ. ಪ್ರಸಾದ್, ಲಕ್ಷ್ಮಮ್ಮ ಉಪಸ್ಥಿತರಿದ್ದರು. ಜಿಲ್ಲಾಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎನ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement