50 ಗಿಡ ರಕ್ಷಣೆ ಮಾಡಿದ ನಜೀರ್ಗೆ ಅಭಿನಂದನೆ
ತುರುವೇಕೆರೆ: ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಪಶು ಸಂಗೋಪನಾ ಇಲಾಖಾ ಆವರಣದಲ್ಲಿ ನೆಡಲಾಗಿದ್ದ ಸುಮಾರು 50ಕ್ಕೂ ಹೆಚ್ಚು ಗಿಡಗಳನ್ನು ಸಂರಕ್ಷಣೆ ಮಾಡಿ ಅವುಗಳ ಪೋಷಣೆ ಮಾಡಿದ ನಜೀರ್ ಅವರನ್ನು ಸ್ಥಳೀಯ ಲಯನ್ಸ್ ಕ್ಲಬ್ ಗೌರವ ಸಮರ್ಪಣೆ ಮಾಡಿತು. ಕಳೆದ ಒಂದು ವರ್ಷದ ಹಿಂದೆ ಸಂಸ್ಥೆ ಗಿಡಗಳನ್ನು ನೆಡುವ ಕಾರ್ಯಕ್ರಮ ಹಾಕಿಕೊಂಡಿತ್ತು. ಆದರೆ ಅವುಗಳ ರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ನಜೀರ್ ವಹಿಸಿಕೊಂಡಿದ್ದರು. ನೀರಿಗೆ ಬರಗಾಲವಿದ್ದ ವೇಳೆಯೂ ನಜೀರ್ ಆವರಣದಿಂದ ಸುಮಾರು ದೂರವಿರುವ ಕೆರೆಯಿಂದ ನೀರು ತಂದು ಅವುಗಳನ್ನು ರಕ್ಷಿಸಿ ಪೋಷಣೆ ಮಾಡಿದ್ದರು. ಈ ನಿಟ್ಟಿನಲ್ಲಿ ನಜೀರ್ ಸೇವೆ ಪರಿಗಣಿಸಿದ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರು ನೀಡಿದ ಭೇಟಿ ವೇಳೆ ಸತ್ಕರಿಸಲಾಯಿತು.
ಜಿಲ್ಲಾ ರಾಜ್ಯಪಾಲ ಟಿ.ಜೆ.ರಾಮಮೂರ್ತಿ, ಎ.ನಾಗರಾಜು ಮತ್ತಿತರರು ಮಾತನಾಡಿದರು. ಲಯನ್ಸ್ ಕ್ಲಬ್ ಮುಖ್ಯಸ್ಥರಾದ ಗಣೇಶ್ ಪಟೇಲ್, ಪಾಂಡುರಂಗ ಗುಪ್ತ, ಧನಂಜಯರಾವ್, ಕಾರ್ಯದರ್ಶಿ ಆರ್.ಸತ್ಯನಾರಾಯಣ್, ಜಗರಾಂ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.