ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್‌ನಲ್ಲಿ ಪ್ರವಾಸ: ಆತ್ಮೀಯ ಬೀಳ್ಕೊಡುಗೆ
ಕುಣಿಗಲ್: ಮಡಿಕೇರಿಯಲ್ಲಿ ನಡೆಯುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್‌ನಲ್ಲಿ ತೆರಳುತ್ತಿರುವ ಪಟ್ಟಣದ ಸಿದ್ಧಾರ್ಥ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ರಾಜಕುಮಾರ್ ಅವರಿಗೆ ಶನಿವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಶುಭಕೋರಿ ಮಾತನಾಡಿದ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ದಿನೇಶ್‌ಕುಮಾರ್, ರಾಜ್ಯದ ವಿವಿಧೆಡೆಯಲ್ಲಿ ನಡೆಯುವ, ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಇನ್ನಿತರೆ ಹಲವಾರು ಕನ್ನಡ ನಾಡು ನುಡಿ ಕಾರ್ಯಕ್ರಮಗಳಿಗೆ ಸೈಕಲ್ ಮುಖಾಂತರವೇ ಪ್ರಯಾಣಿಸಿ ಇದುವರೆಗೆ ಸುಮಾರು 45000 ಕಿ.ಮಿ. ವರೆಗೂ ಕ್ರಮಿಸಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನದಿಂದ ಸಮ್ಮೇಳನಗಳಲ್ಲಿ ಭಾಗವಹಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈಗ ಮಡಿಕೇರಿಯಲ್ಲಿ ನಡೆಯುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್‌ನಲ್ಲಿ ಪ್ರಯಾಣ ಬೆಳೆಸುವ ಮೂಲಕ ನಾಡು ನುಡಿಯ ಬಗ್ಗೆ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ.
ಕೇವಲ ನಾಡು ನುಡಿಯ ಅಭಿಮಾನವಷ್ಟೇ ಅಲ್ಲದೆ ಪರಿಸರ ರಕ್ಷಣೆ, ಇಂಧನ ಉಳಿತಾಯ, ಆರೋಗ್ಯವಂತರಾಗಿ ಜೀವಿಸಲು ಸೈಕಲ್ ಯಾತ್ರೆ ಮೂಲಕ ಸಾರ್ವಜನಿಕರು ಹಾಗೂ ಯುವಕರಿಗೆ ಜಾಗೃತಿ ಮೂಡಿಸುತ್ತಿರಾಜ್‌ಕುಮಾರ್ ಅವರ ಈ ಕಾರ್ಯವನ್ನು ಶ್ಲಾಘನೀಯ ಎಂದರು.
ತಾಲೂಕು ಶಿಕ್ಷಣಾಧಿಕಾರಿ ಟಿ.ಜಿ.ಸಿದ್ದಯ್ಯ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಡಿ.ಕೃಷ್ಣ, ತಾಲೂಕು ಕ.ರ.ವೇ. ಅಧ್ಯಕ್ಷ ಮಂಜುನಾಥ್, ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಅಂದಾನಿಗೌಡ, ವಿಪ್ರ ಟ್ಯುಟ್ಯ್ಲ್‌ನ ಸತೀಶ್, ಸವಿತಾ ಸಮಾಜದ ಕೇಶವ್, ಪತ್ರಕರ್ತ ರವೀಂದ್ರಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್.ಆರ್.ಚಿಕ್ಕಣ್ಣ, ಹಾಗೂ ಪಧಾಧಿಕಾರಿಗಳಾದ ನಿವೃತ್ತ ಶಿಕ್ಷಕ ರಾಧಾಕೃಷ್ಣ, ರಂಗನಾಥ್, ಶ್ರೀಧರ್ ಆಡಿಟರ್‌ವೇಣು, ಮತ್ತು ಪ್ರಕಾಶ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.