ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಖಾಲಿ ಇರುವ ಶಿಕ್ಷಕರ ಹುದ್ದೆ ಶೀಘ್ರ ಭರ್ತಿ

Mainashree
Updated On : 5 Jan 2014, 11:18 am

ಶಿರಾ: ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದ್ದು ಹಂತ ಹಂತವಾಗಿ ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು ಎಂದು ರಾಜ್ಯ ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದರು.
ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಪರಂಪರೆ ಕೂಟ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳಾ ಕಾಲೇಜು: ಶಿರಾ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಗಣನೀಯವಾಗಿ ವಿದ್ಯಾರ್ಥಿನಿಯರ ದಾಖಲಾತಿ ಸಂಖ್ಯೆ ಹೆಚ್ಚಿದ್ದು, ಇವರ ಉನ್ನತ ಶಿಕ್ಷಣಕ್ಕಾಗಿ ಶಿರಾ ನಗರದಲ್ಲೊಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆಕಾಲೇಜಿನ ಮಂಜೂರಾತಿಗೆ ಕ್ರಿಯಾಶೀಲ ಪ್ರಯತ್ನ ಮಾಡಲಾಗುವುದು ಎಂದ ಸಚಿವರು ಪ್ರಸ್ತುತ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ 1000 ಕ್ಕೂ ಅಧಿಕ ವಿದ್ಯಾರ್ಥಿನಿಯರು ದಾಖಲಾಗಿದ್ದು ಶೈಕ್ಷಣಿಕವಾಗಿ ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಈ ಭಾಗದ ವಿದ್ಯಾರ್ಥಿನಿಯರು ಪ.ಪೂ. ಕಾಲೇಜುಗಳಿ ಹಾಜರಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎಂದರು.
ಸದರಿ ಕಾಲೇಜಿನ ಆವರಣದಲ್ಲಿ ಸಭಾಂಗಣದ ನಿರ್ಮಾಣಕ್ಕಾಗಿ 5 ಲಕ್ಷ ರು.ಗಳ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವ ಟಿ.ಬಿ.ಜಯಚಂದ್ರ ಅವರು ಭರವಸೆ ನೀಡಿದರು.
ಪ.ಪೂ. ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್ ಮಾತನಾಡಿ, ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಾಚಾರ್ಯರಾದ ಪಿ.ಎಚ್. ಮಹೇಂದ್ರಪ್ಪನವರ ಕಾರ್ಯದಕ್ಷತೆ ಅಪಾರವಾಗಿದ್ದು, ಇವರು ಸದಾ ಕಾಲೇಜಿನ ಉನ್ನತಿ ಬಗ್ಗೆ ಚಿಂತಿಸಿರುತ್ತಾರೆ. ಇವರ ಶ್ರಮಕ್ಕೆ ಪ್ರತಿಫಲವಾಗಿ ವಿದ್ಯಾರ್ಥಿನಿಯರು ಹೆಚ್ಚಿನ ಅಂಕ ಪಡೆಯುವುದರ ಮೂಲಕ ಉನ್ನತ ಶಿಕ್ಷಣ ಪಡೆಯಬೇಕು ಎಂದು ಆಶಿಸಿದರು.
ಅಭಿನಂದನೆ: ದರ್ಶನ್ ಅಭಿಮಾನಿ ಬಳಗ ಹಾಗೂ ಕನ್ನಡ ಸೇನೆಯ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಮಮತ, ಬಿ.ಲಕ್ಷ್ಮಿ, ಶಿಲ್ಪ, ಲಾವಣ್ಯ, ಕವಿತ, ಅವರನ್ನು  ಸನ್ಮಾನಿಸಲಾಯಿತು.
ಪ್ರಾಚಾರ್ಯ ಪಿ.ಎಚ್.ಮಹೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯೆ ಶೋಭಾ ನಾಗರಾಜು, ಬಿ.ಇ.ಓ. ಎಸ್.ರಾಜ್‌ಕುಮಾರ್, ಉಪ ಪ್ರಾಚಾರ್ಯ ರಾಮಚಂದ್ರಪ್ಪ, ನಗರಸಭಾ ಸದಸ್ಯ ರಾಜಣ್ಣ, ನೂರುದ್ದೀನ್, ಪರಂಪರೆ ಕೂಟದ ಗೋವಿಂದಯ್ಯ, ಉಜ್ಜೀವನ್ ಫೈನಾನ್ಸ್‌ನ ರವಿಕುಮಾರ್, ಕನ್ನಡ ಸೇನೆ ಅಧ್ಯಕ್ಷ ಕೊಟ್ಟರಂಗಯ್ಯ, ದರ್ಶನ್ ಅಭಿಮಾನಿ ಬಳಗ ಅಧ್ಯಕ್ಷ ಗುರುಪ್ರಸಾದ್ ಸೇರಿದಂತೆ ಹಲವರು ಹಾಜರಿದ್ದರು. ಪ್ರಾರಂಭದಲ್ಲಿ ಅಮೃತ ಪ್ರಾರ್ಥಿಸಿ, ಹರ್ಷಿತ ಸ್ವಾಗತಿಸಿದರು.  ಆಯಿಶಾ ಸಿದ್ದಿಕ್, ಸುಮಯ್ಯಾ ಬಾನು, ಹಸೀನ ಹಾಗೂ ಹರ್ಷಿಯಾ  ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement