ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಮ್ಮ ನಡೆ ನುಡಿಯಲ್ಲಿದೆ ನಿಜವಾದ ಧರ್ಮ

Mainashree
Updated On : 5 Jan 2014, 11:16 am

ತುಮಕೂರು: ನಿಜವಾದ ಧರ್ಮ ನಮ್ಮ ನಡೆ ನುಡಿಯಲ್ಲಿದೆ ಎಂದು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸಂಸ್ಥಾಪಕ ಪಿ.ಶಾಂತಿಲಾಲ್‌ಹೇಳಿದರು.
ಅವರು ತುಮಕೂರಿನ ಮಹಾವೀರ ಶ್ವೇತಾಂಬರ ಆಗಮ ಮಂದಿರದಲ್ಲಿ ಟಿ.ವಿ.ಎಸ್. ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಧರ್ಮ ವಜ್ರದ ತಕ್ಕಡಿಯಂತೆ ಬಹಳ ಸೂಕ್ಷ್ಮವಾದುದು. ಧರ್ಮದ ಬಗ್ಗೆ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
ಜೈನಧರ್ಮವು ಅಹಿಂಸೆಯಲ್ಲಿ ಚಿಂತಿಸುವುದಿಲ್ಲ. ಜೈನಧರ್ಮದಲ್ಲಿರುವ ಶ್ವೇತಾಂಬರ ಹಾಗೂ ದಿಗಂಬರ ಈ ಎರಡು ಪಂಥಗಳಲ್ಲಿ ವ್ಯತ್ಯಾಸಗಳು ತುಂಬಾ ಕಡಿಮೆ. ಜೈನ ಧರ್ಮದಲ್ಲಿ ಮಂತ್ರವು ಬೇರೆ ಧರ್ಮಗಳಿಗಿಂತ ವಿಭಿನ್ನವಾಗಿದೆ. ನಮ್ಮ ಒಳಶತ್ರುಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ನಾಶಮಾಡುವುದೇ ಜೈನಧರ್ಮದ ಗುರಿಯಾಗಿದೆ. ಜೈನಧರ್ಮದ ನಮಸ್ಕಾರ ಮಂತ್ರಗಳಿಂದ ನಮ್ಮ ಒಳಶತ್ರುಗಳನ್ನು ನಾಶಪಡಿಸಬಹುದಾಗಿದೆ ಎಂದರು.
ಜೈನಧರ್ಮದಲ್ಲಿನ ಆಗಮಗಳು ಜೈನ ಇತಿಹಾಸವನ್ನು ಕುರಿತು ರಚನೆಯಾಗಿದ್ದರೆ, ಕಲ್ಪಸೂತ್ರಗಳು ಶ್ರೇಷ್ಠಪವಿತ್ರ ಗ್ರಂಥಗಳಾಗಿವೆ. ಭಾರತದಲ್ಲಿ ಅತಿಹೆಚ್ಚು ಜೈನ ದೇವಾಲಯಗಳು ಗುಜರಾತ್‌ನಲ್ಲಿವೆ ಎಂದರು. ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಕಾರ್ಯದರ್ಶಿ ಅಬ್ಬಿನಹೊಳೆ ಸುರೇಶ್, ಛಾಯಾಗ್ರಾಹಕ  ಬಿಂಬಮಹೇಶ್, ಟಿ.ವಿ.ಎಸ್. ಶಾಲೆಯ ಶಿಕ್ಷಕ ಮೇಘನ, ತಸ್ನೀಮ್ ಮತ್ತು ರಾಜ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement