ಪರಮೇಶ್ವರ್ ಮಾಡಿರುವ ತ್ಯಾಗ, ಸಾಧನೆ ಮರೆಯದಿರಿ
ಕೊರಟಗೆರೆ: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ತು.ಬಿ. ಮಲ್ಲೇಶ್ ಆಗ್ರಹಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಕ್ಷಕ್ಕೆ ಡಾ.ಜಿ. ಪರಮೇಶ್ವರ್ ಮಾಡಿರುವ ತ್ಯಾಗ ಹಾಗೂ ಸಾಧನೆ ಮರೆಯಬಾರದು. ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಪರಮೇಶ್ವರ್ ಸ್ಥಾನಮಾನದ ಬಗ್ಗೆ ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ ನೀಡಿರುವುದು ಅವರ ವೈಯಕ್ತಿಕವೆ ಹೊರತು ಪಕ್ಷದಲ್ಲ ಎಂದ ಅವರು ಪಕ್ಷದ ನಿಯಮದಂತೆ ಅಧಿಕಾರಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷರೆ ಮುಖ್ಯಮಂತ್ರಿ ಸ್ಥಾನ ಪಡೆಯುವರು ಡಾ.ಜಿ. ಪರಮೇಶ್ವರ್ ಮುಖ್ಯಮಂತ್ರಿಗಳಾಗಿದ್ದರೆ ತುಮಕೂರು ಜಿಲ್ಲೆಯೆ ಸಮಗ್ರ ಅಭಿವೃದ್ಧಿಯಾಗುತ್ತಿತ್ತು ಎಂದರು.
ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರು ಒಂದಾಗಬೇಕು. ತಪ್ಪಿದಲ್ಲಿಇದರ ಲಾಭವನ್ನು ಬೇರೆ ಪಕ್ಷದರವರು ಪಡೆಯುವರು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಯಲ್ಲಿ ಗ್ರಾಮಾಂತರ ಎಸ್ಟಿ ಸೆಲ್ ಅಧ್ಯಕ್ಷ ರಂಗರಾಜು, ನಗರ ಕಾರ್ಯದರ್ಶಿ ಕೆ.ಆರ್. ಓಬಳರಾಜು, ಪ.ಪಂ.ಸದಸ್ಯ ಕೆ.ವಿ.ಮಂಜುನಾಥ್, ಮುಖಂಡರಾದ ಗಂಗಾಧರಪ್ಪ. ಅಂಜಿನಪ್ಪ, ವೀರಭದ್ರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.