ಸುದ್ದಿ ಸಂಕ್ಷೇಪ
ನಾಳೆ ಕಲಾಕೃತಿಗಳ ಪ್ರದರ್ಶನ
ತುಮಕೂರು: ಇಲ್ಲಿನ ಓಶೋ ಧ್ಯಾನ ಕೇಂದ್ರದಲ್ಲಿ ಜ.7 ರಂದು ಮಂಗಳವಾರ ಸಂಜೆ 5.30 ರಿಂದ 7.30 ರವರೆಗೆ ದೇಸಿ ಬಳಗದ ವತಿಯಿಂದ ಕೋಟೆ ಕುಮಾರ್ ಅವರ ಕಲಾಕೃತಿ ಪ್ರದರ್ಶನ, ಸಂವಾದ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ. ನಟರಾಜ್ ಬೂದಾಳ್ ವಹಿಸಲಿದ್ದಾರೆ. ಪ್ರಭು ಅರಸೂರು ಮತ್ತು ಅಕ್ರಂ ಪಾಷ ಪ್ರತಿಕ್ರಿಯೆ ನೀಡಲಿದ್ದಾರೆ.
ಯುವ ಕಾಂಗ್ರೆಸ್ ಚುನಾವಣೆ
ತುಮಕೂರು: 2014-15ನೇ ಸಾಲಿನ ಯುವ ಕಾಂಗ್ರೆಸ್ ಚುನಾವಣೆಗೆ 6 ಮತ್ತು 7 ರಂದು ಚುನಾವಣೆ ನಡೆಯಲಿದೆ. 6 ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೆ.ಬಿ. ಕ್ರಾಸ್ನ ಮಾತಾ ಕನ್ವೆನ್ಷನ್ ಹಾಲ್ನಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು, ತುರವೇಕೆರೆ, ಗುಬ್ಬಿ ತಾಲೂಕಿನ ಮತದಾನ ನಡೆಯಲಿದೆ. 7 ರಂದು ಶೆಟ್ಟಿಹಳ್ಳಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ತುಮಕೂರು ನಗರ, ಕೊರಟಗೆರೆ, ಮಧುಗಿರಿ, ತುಮಕೂರು ಗ್ರಾಮಾಂತರ ಚುನಾವಣೆ ನಡೆಯಲಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಆರ್. ರಾಜೇಂದ್ರ ತಿಳಿಸಿದ್ದಾರೆ.
ಹಾಲಿನ ಖರೀದಿ ದರ ಹೆಚ್ಚಳ
ಜಿಲ್ಲೆಯಲ್ಲಿ ತೀವ್ರ ಬರಗಾಲ ಇರುವುದರಿಂದ ರೈತರು ಉತ್ಪಾದಿಸುವ ಹಾಲಿಗೆ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಹಾಲು ಉತ್ಪಾದಕರ ಸಂಘಗಳಿಗೆ ಪೂರೈಸುವ ಪ್ರತಿ ಲೀಟರ್ಗೆ 1.25 ರು. ಹೆಚ್ಚಿಸಲಾಗಿದೆ. ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 22.25 ರು. ಹಾಗೂ ಸಂಘಗಳು ಒಕ್ಕೂಟಕ್ಕೆ ಪೂರೈಸುವ ಪ್ರತಿ ಲೀಟರ್ ಹಾಲಿಗೆ 22.76 ರು. ದರ ಇರುತ್ತದೆ ಎಂದು ತುಮಕೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ತಿಳಿಸಿದ್ದಾರೆ.
22 ರಂದು ಕ್ಯಾಂಪಸ್ ರೆಕ್ರೂಟ್ಮೆಂಟ್
ಇಲ್ಲಿನ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.22 ರಂದು ಬೆಳಗ್ಗೆ 9 ಗಂಟೆಗೆ ಉಚಿತ ಪೂಲ್ ಕ್ಯಾಂಪಸ್ ರೆಕ್ರೂಟ್ಮೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಿಎ, ಬಿಕಾಂ, ಬಿಬಿಎಂ, ಬಿಸಿಎ ಹಾಗೂ ಬಿಎಸ್ಸಿ ವಿಷಯಗಳಲ್ಲಿ 2014 ರಲ್ಲಿ ಪದವಿ ಪಡೆಯುವವರಾಗಿರಬೇಕು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಇಂದು ಸಂಸ್ಕೃತೋತ್ಸವ
ತುಮಕೂರು: ಇಲ್ಲಿನ ಸಿದ್ಧಲಿಂಗೇಶ್ವರ ವೇದ ಸಂಸ್ಕೃತ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜ.6 ರಂದು ಸಿದ್ಧಗಂಗಾ ಮಠದಲ್ಲಿ ಮಧ್ಯಾಹ್ನ 2.30 ಕ್ಕೆ ಸಂಸ್ಕೃತೋತ್ಸವ ನಡೆಯಲಿದೆ. ಸಾನಿಧ್ಯವನ್ನು ಶಿವಕುಮಾರ ಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಿದ್ಧಲಿಂಗ ಸ್ವಾಮೀಜಿ ನೆರವೇರಿಸುವರು. ಅಧ್ಯಕ್ಷತೆಯನ್ನು ಎಲ್. ಬಸವರಾಜ್ ವಹಿಸಲಿದ್ದಾರೆ. ವಿದ್ವಾನ್ ಕೆ. ಬಸವರಾಜು, ಡಾ. ಪ್ರಭುಲಿಂಗದೇವರು ಉಪಸ್ಥಿತರಿರುವರು.
ಸುಭಾಷ್ ರೆಡ್ಡಿ ಪಾಟೀಲ್ಗೆ ಶ್ರದ್ಧಾಂಜಲಿ
ತುಮಕೂರು: ರೈಲು ದುರಂತದಲ್ಲಿ ಮರಣ ಹೊಂದಿದ ಸುಭಾಷ್ ರೆಡ್ಡಿ ಪಾಟೀಲ್ಗೆ ತುಮಕೂರು ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಳೆದ ಡಿಸೆಂಬರ್ 27 ರಂದು ನಾಂದೇವಾಡ ರೈಲು ದುರಂತದಲ್ಲಿ ಮೃತರಾದ ಭಾರತ ಸೇವಾದಳದ ಕೇಂದ್ರ ಸಂಘಟನಾ ಕಾರ್ಯದರ್ಶಿ ಸುಭಾಷ್ ರೆಡ್ಡಿ ಪಾಟೀಲ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರನ್ನಗಲಿದ ಕುಟುಂಬ ವರ್ಗದವರಿಗೆ ಆ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಚ್.ಸಿ. ಹನುಮಂತಯ್ಯ, ಜಿಲ್ಲಾ ಕಾರ್ಯದರ್ಶಿ ಚಿ.ನಾ. ಏಕೇಶ್, ಜಿಲ್ಲಾ ಖಜಾಂಚಿ ಕೃಷ್ಣಮೂರ್ತಿ, ಕೇಂದ್ರ ಸಮಿತಿ ಸದಸ್ಯರಾದ ಬಿ.ಜಿ ವೆಂಕಟೆಗೌಡ, ತಾಲೂಕು ಅಧ್ಯಕ್ಷ ಮಾಲೂರಪ್ಪ, ರತ್ನಕರ ಶೆಟ್ಟಿ, ತಾಲೂಕು ಕಾರ್ಯದರ್ಶಿ ಮುತ್ತುನಾಯಕ್, ಜಿಲ್ಲಾ ಸಂಘಟಕ ಎಚ್.ಸಿ. ಪ್ರಸನ್ನ ಕುಮಾರ್ ಹಾಜರಿದ್ದರು.
ಸ್ವಾಮಿ ವಿವೇಕಾನಂದರ ವರ್ಷಾಚರಣೆ
ತಿಪಟೂರು: ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆಯ ಅಂಗವಾಗಿ ಪಟ್ಟಣದಲ್ಲಿ ವಿವಿಧ ಕಾಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.5ರಂದು ಪಟ್ಟಣದ ಎಂ.ವಿ.ಸೀತಾರಾಮಯ್ಯಭವನದಲ್ಲಿ ಚಿತ್ರಕಲಾ ಸ್ಪರ್ಧೆ, ಜ.8ರಂದು ಸಾಯಿಬಾಬಾ ಮಂದಿರದಲ್ಲಿ ಪಂಜಿನ ಮೆರವಣಿಗೆ, ಜ.12ರಂದು ನಗರದ ಕೆಂಪಮ್ಮ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಮೆರವಣಿಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮನು ಮೊ.9141395342 ಅಥವಾ ರವೀಂದ್ರ ಮೊ. 9880881803.