ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಸಾಯಿಖಾನೆಗೆ ಗೋವುಗಳ ರವಾನೆ

Mainashree
Updated On : 6 Jan 2014, 11:04 am

ತಿಪಟೂರು: ತಾಲೂಕಿನ ಕರಡಾಳು ಗ್ರಾಮ ಎಪಿಎಂಸಿಗೆ ಸೇರಿದ್ದು, ಇಲ್ಲಿ ಪ್ರತಿ ಮಂಗಳವಾರ ದನಗಳ ಸಂತೆ ನಡೆಯುತ್ತದೆ. ಆದರೆ ಇತ್ತೀಚೆಗೆ ಕಾಲುಬಾಯಿ ಜ್ವರ ರಾಜ್ಯಾದ್ಯಂತ ದನಗಳಿಗೆ ಹೆಚ್ಚಿದ್ದ ಹಿನ್ನಲೆಯಲ್ಲಿ ಇಲ್ಲಿ ಸಂತೆ ನಡೆಯುವುದನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಆದರೆ ಕಸಾಯಿ ಖಾನೆಗೆ ಗೋವುಗಳನ್ನು ಸಾಗಿಸುವ ಕೆಲ
ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳು ಪ್ರತಿ ಸೋಮವಾರ ರಾತ್ರಿ ಕದ್ದುಮುಚ್ಚಿ ಇಲ್ಲಿಗೆ ದನಗಳನ್ನು ಸೇರಿಸಿ ವ್ಯಾಪಾರ ಮಾಡಿ ರಾತ್ರೋ ರಾತ್ರಿ ದೂರದ ಕಸಾಯಿ ಖಾನೆಗೆ ರವಾನಿಸುತ್ತಿದ್ದಾರೆಂದು ಸುತ್ತಮುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕಳ್ಳ ವ್ಯಾಪಾರ ಕಾನೂನು ಬಾಹಿರವಾಗಿದ್ದು, ಇಲ್ಲಿನ ನೊಣವಿನಕೆರೆ ಪೊಲೀಸ್ ಠಾಣೆಗೆ ಇದು ತಿಳಿದಿದ್ದರೂ ಇಲ್ಲಿನ ಕೆಲ ಪೇದೆಗಳೇ ಈ ದಂಧೆಗೆ ಕುಮ್ಮಕ್ಕು ನೀಡಿ ಕಳ್ಳ ವ್ಯವಹಾರ ಸಲೀಸಾಗಿ ನಡೆಯಲು ಸಹಕರಿಸುತ್ತಿದ್ದಾರೆಂದು ಆರೋಪಿಸಲಾಗುತ್ತಿದ್ದು ಕಳ್ಳ ವ್ಯವಹಾರದ ವಿರುದ್ಧ ಹಾಗೂ ಕುಮ್ಮಕ್ಕು ನೀಡುತ್ತಿರುವವರ ಮತ್ತು ಕಳ್ಳದಂಧೆಯಲ್ಲಿ ನಿರತರಾಗಿರುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಬೇಕೆಂದು ಇಲ್ಲಿನ ದಲಿತ ಮುಖಂಡರು ಒತ್ತಾಯಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement