ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೃತದೇಹ ಬಿಟ್ಟು ಪರಾರಿಯಾದ ಆಟೋ ಚಾಲಕ

Mainashree
Updated On : 6 Jan 2014, 11:06 am

ಕುಣಿಗಲ್: ಗಾಯಾಳು ಮಹಿಳೆಯೊಬ್ಬಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ತಂದ ಆಟೋ ಚಾಲಕ, ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಮೃತದೇಹ ಬಿಟ್ಟು ಪರಾರಿಯಾಗಿದ್ದು, ಮಹಿಳೆಯ ವಿವರ ಪತ್ತೆಹಚ್ಚಲು ಪೊಲೀಸರು, ಆಸ್ಪತ್ರೆ ಸಿಬ್ಬಂದಿ ಸಂಜೆವರೆಗೂ ಪೇಚಿಗೆ ಸಿಲುಕಿದ ಘಟನೆ ಹುಲಿಯೂರುದುರ್ಗದಲ್ಲಿ ನಡೆದಿದೆ.
ಭಾನುವಾರ ರಾತ್ರಿ, ಆಟೋರಿಕ್ಷಾ ಚಾಲಕನೊರ್ವ ಗಾಯಾಳು ಮಹಿಳೆಯೊರ್ವಳನ್ನು ಚಿಕಿತ್ಸೆಗೆ ಆಟೋರಿಕ್ಷಾದಲ್ಲಿ ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆತಂದು, ತಮ್ಮ ಸಂಬಂಧಿಕರು ತೀವ್ರ ನಿತ್ರಾಣರಾಗಿದ್ದಾರೆಂದು ನರ್ಸ್‌ಗೆ ಹೇಳಿ, ಕೈಗಾಡಿ ಪಡೆದು ಮಹಿಳೆಯನ್ನು ಕೈಗಾಡಿಯಲ್ಲಿ ಕೂರಿಸಿ, ಚಿಕಿತ್ಸೆಗೆ ಆಸ್ಪತ್ರೆ ಒಳಗೆ ಕರೆತರುವಾಗ ಆಕೆ ಮೃತಪಟ್ಟಳೆನ್ನಲಾಗಿದೆ.
ಇತ್ತ ಕೈಗಾಡಿ ಕೊಟ್ಟ ನರ್ಸ್ ರಾತ್ರಿ ಪಾಳಿ  ತಮ್ಮ ಪಾಡಿಗೆ ತಾವು ಒಳಗಿದ್ದರು. ಗಾಯಾಳು ಮಹಿಳೆ ಮೃತಪಟ್ಟಿದ್ದಾಳೆಂದು ತಿಳಿದ ಚಾಲಕ, ಕೂಡಲೆ ಅಲ್ಲಿಂದ ಯಾರಿಗೂ ಹೇಳದಂತೆ ನಾಪತ್ತೆಯಾದನು.
ಕೆಲಹೊತ್ತಿನ ನಂತರ ನರ್ಸ್ ಬಂದು ನೋಡಲಾಗಿ ಮಹಿಳೆ ಮೃತದೇಹ ಮಾತ್ರವಿದ್ದು, ಜೊತೆಯಲ್ಲಿದ್ದವ ನಾಪತ್ತೆಯಾಗಿದ್ದ.
ನರ್ಸ್ ಏನೊಂದು ಮಾಡಲು ತೋಚದಂತಾಯಿತು. ಸೋಮವಾರ ಬೆಳಗ್ಗೆ ವಿಷಯ ತಿಳಿದ ಹುಲಿಯೂರುದುರ್ಗ ಪೊಲೀಸರು, ಆಸ್ಪತ್ರೆಗೆ ಬಂದು ಮೃತದೇಹ ಪರಿಶೀಲಿಸಲಾಗಿ, ಆಕೆ 35 ವರ್ಷದ ವಿವಾಹಿತ ಮಹಿಳೆಯಾಗಿದ್ದು, ತಲೆಗೆ ತೀವ್ರ ಪೆಟ್ಟಾದ ಕಾರಣ ಮೃತಪಟ್ಟಿರಬಹುದೆಂದು ಶಂಕಿಸಿದ್ದಾರೆ. ಆದರೆ, ಮೃತದೇಹ ಆಸ್ಪತ್ರೆಗೆ ತಂದ ರಿಕ್ಷಾಚಾಲಕನ ಮತ್ತು ಮೃತಮಹಿಳೆಯ ವಿವರ ಪತ್ತೆಹಚ್ಚಲು ಸಂಜವರೆಗೂ ಪರದಾಡುವಂತಾಯಿತು.
ನಂತರ ಮೃತಳ ಭಾವಚಿತ್ರ ಹಿಡಿದು ವಿವಿಧೆಡೆಗಳಲ್ಲಿ ವಿಳಾಸ ಪತ್ತೆ ಹಚ್ಚಲು ಮುಂದಾದ ಪೊಲೀಸರಿಗೆ, ತಾವರೆಕೆರೆ ಗ್ರಾಮದ ಬಳಿ ಗುರುತು ಪತ್ತೆಹಚ್ಚಿದ್ದು, ಮೃತಳು ತಾಲೂಕಿನ ಗಡಿ ಗ್ರಾಮವಾದ ರಾಮನಗರ ತಾಲೂಕಿನ ವಿರೂಪಸಂದ್ರ ಶಿವಮ್ಮ ಎಂದೂ, ಈಕೆ ತನ್ನ ಗಂಡನೊಂದಿದೆ ಕಳೆದ ಹಲವು ವರ್ಷಗಳಿಂದ ವಿರೂಪಸಂದ್ರದಲ್ಲೆ ತಂಗಿದ್ದು, ಕಳೆದ ರಾತ್ರಿ ಪತಿ ಸಿದ್ದಪ್ಪನೊಂದಿಗೆ ಕಾರ್ಯನಿಮಿತ್ತ ಚನ್ನಪಟ್ಟಣಕ್ಕೆ ತೆರಳುವುದಾಗಿ ಹೋದಳೆಂದು, ಗ್ರಾಮಸ್ಥರು ತಿಳಿಸಿದೆ ಮೇರೆಗೆ , ಮೃತಳ ಸಂಬಂಧಿಕರಿಗೆ ವಿಷಯ ತಿಳಿಸಿ, ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement