ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಮಾಯಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಪಾತ್ರಗಳಿಗೆ ಜೀವ ತುಂಬಿದ ಕುವೆಂಪು

Mainashree
Updated On : 6 Jan 2014, 11:04 am

ಕ.ಪ್ರ. ವಾರ್ತೆ     ತುಮಕೂರು     ಜ. 6
ಕುವೆಂಪು ತಮ್ಮ ರಾಮಾಯಣ ದರ್ಶನಂ ಮಹಾಕಾವ್ಯದ ಮೂಲಕ ಮೂಲ ರಾಮಾಯಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಪಾತ್ರಗಳಿಗೆ ಜೀವ ತುಂಬುವ ಮಹಾನ್ ಕಾರ್ಯ ಮಾಡಿದ್ದಾರೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಜಿ.ಎಂ. ಸಣ   ಮುದ್ದಯ್ಯ ಅಭಿಪ್ರಾಯಪಟ್ಟರು.
ಅವರು ನಗರದ ಕನ್ನಡ ಸೇನೆ ವತಿಯಂದ ಗಂಗೋತ್ರಿ ರಸ್ತೆಯಲ್ಲಿ ಆಯೋಜಿಸಿದ್ದ ಕುವೆಂಪು ಅವರ 109ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನುದ್ದಕ್ಕೂ ವೈಚಾರಿಕ ಆಲೋಚನೆಗಳನ್ನು ಬಿತ್ತಿದ ಕುವೆಂಪು ಅವರು ಸಹಜವಾಗಿಯೇ  ಜ್ಞಾನಪೀಠ ಪ್ರಶಸ್ತಿ ಪಡೆದರು ಎಂದರು.
ಕವಿ ಎನ್. ನಾಗಪ್ಪ ಮಾತನಾಡಿ, ವಿಶ್ವ ಮಾನವತಾವಾದವನ್ನು ಸಾರಿದ ನವೋದಯದ ಪ್ರಮುಖ ಕವಿಗಳಲ್ಲಿ ಆಗ್ರಸ್ಥಾನ ಪಡೆದಿರುವ ಕುವೆಂಪು, ಜಾತಿ, ಮತ, ದೇಶದ ಗಡಿ ಮೀರಿ ಹೇಗೆ ಮನುಷ್ಯ ಬೆಳೆಯಬೇಕು ಎಂಬುದನ್ನು ತಮ್ಮ ಹಲವಾರು ಕವಿತೆಗಳಲ್ಲಿ ಸಾರಿ ಹೇಳಿದ್ದಾರೆ ಎಂದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಹಾಗೂ ಎಪಿಎಂಸಿ ನಿರ್ದೇಶಕ ಧನಿಯಾಕುಮಾರ್ ಮಾತನಾಡಿ, ಕುವೆಂಪು ಜಮೀನ್ದಾರರ ಮನೆತನದಲ್ಲಿ ಹುಟ್ಟಿದರೂ ಅದೆಲ್ಲವನ್ನು ಮೀರಿ ಬಡವರ, ನಿರ್ಗತಿಕರ ಧ್ವನಿಯಾಗಿ ಜೀವಿತದವರೆಗೂ ದುಡಿದವರು. ಜಲಗಾರ, ಶೂದ್ರತಪಸ್ವಿ ನಾಟಕಗಳ ಮೂಲಕ ಶೋಷಿತ ಸಮುದಾಯಗಳಿಗೆ ನೈತಿಕ ಬಲ ತುಂಬಿದವರು ಎಂದರು.
ವಿವಿಧ ವಿವಿಗಳ ನಾಲ್ಕು ಡಾಕ್ಟರೇಟ್ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ರತ್ನ, ಜ್ಞಾನಪೀಠ ಹಾಗೂ ರಾಷ್ಟ್ರಕವಿ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟ ಮೊದಲ ಕವಿ ಕುವೆಂಪು ಎಂದರು.
ಕನ್ನಡಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಆಶಾ ಕಾಶಿನಾಥ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಬಸವಸೇನೆಯ ಅಧ್ಯಕ್ಷ ಗಂಗರಾಜು, ಮುಖಂಡರಾದ ಉದಯ್, ಕೆ.ವಿ. ಪ್ರಕಾಶ್, ಪುಟ್ಟರಾಜು, ಗಿರೀಶ್, ಜ್ಯೋತಿ, ವಿಜಯಕುಮಾರ್ ಭಾಗವಹಿಸಿದ್ದರು. ವಿಠಲ್ ಸ್ವಾಗತಿಸಿದರು, ಆರ್.ಎನ್. ವೆಂಕಟಾಚಲ ನಿರೂಪಿಸಿದರು. ಸತೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement