ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸೊಗಡು ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

Mainashree
Updated On : 6 Jan 2014, 11:03 am

ಕ.ಪ್ರ. ವಾರ್ತೆ     ತುಮಕೂರು     ಜ. 6
ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ   ನವರ ವಿರುದ್ದ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಲಾಯಿತು. ಸೊಗಡು ಶಿವಣ    ದಕ್ಷ ಪೊಲೀಸ್ ಅಧಿಕಾರಿ ಲಕ್ಷ್ಮಣ್ ಅವರ ವಿರುದ್ಧ ಅತ್ಯಂತ ಕೀಳು ಮಟ್ಟದ, ಅವಹೇಳನಕಾರಿ ಶಬ್ದಗಳನ್ನು ಬಳಸಿ ನಿಂದಿಸುತ್ತಿರುವುದನ್ನು ಸಹಿಸಲಸಾಧ್ಯ ಎಂದು ದಲಿತ ಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಆರ್. ಲಕ್ಷ್ಮಣ್ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಜಿಲ್ಲಾ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ವ್ಯವಸ್ಥೆ ಸುಧಾರಣೆಗೆ ಆರ್. ಲಕ್ಷ್ಮಣ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಶಿರಾ ಕೋಮು ಗಲಭೆ ಹತ್ತಿಕ್ಕುವಲ್ಲಿ ಆರ್. ಲಕ್ಷ್ಮಣ್ ಪಾತ್ರ ಮಹತ್ತರವಾದುದು. ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಮಹತ್ತರ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ದಲಿತಪರ ಸಂಘಟನೆಗಳು ತಿಳಿಸಿವೆ.
ನಿರ್ದಾಕ್ಷಿಣ್ಯ ಕ್ರಮ: ಆರ್. ಲಕ್ಷ್ಮಣ್ ಅಧಿಕಾರ ವಹಿಸಿಕೊಂಡ ಕೂಡಲೇ ರೌಡಿ ಪಟ್ಟಿಯಲ್ಲಿದ್ದವರನ್ನು ಪೊಲೀಸ್ ಠಾಣೆಗೆ ಕರೆಸಿ, ಎಚ್ಚರಿಕೆ ಕೊಟ್ಟು, ಅವರ ಚಲನವಲನಗಳ ಬಗ್ಗೆ ನಿಗಾವಹಿಸಲು ಸೂಚನೆ ನೀಡಿದರು. ತುಮಕೂರು ನಗರದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಸರಗಳ್ಳತನ ತಡೆದು, ಸರಗಳ್ಳರನ್ನು ಬಂಧಿಸಿ, ಜೈಲಿಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಮೀಟರ್ ಬಡ್ಡಿ ಖದೀಮರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿದ್ದಾರೆ. ಇದೆಲ್ಲಾಕ್ಕಿಂತ ಮಿಗಿಲಾಗಿ ಶಿರಾ ತಾಲೂಕಿನಲ್ಲಿ ಚಿಗುರೊಡೆದ ಕೋಮುಗಲಭೆಯನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ಹತ್ತಿಕ್ಕಿ, ಶಾಂತಿ ನೆಲೆಸಲು ಅಪಾರವಾಗಿ ಶ್ರಮಿಸಿದ್ದಾರೆ. ಈ ಮೂಲಕ ಕರ್ತವ್ಯಪರತೆ ಮೆರೆದಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ   , ತಮ್ಮ ಹಿಂಬಾಲಕರನ್ನು, ವಿಶೇಷವಾಗಿ ಶಿರಾ ಕೋಮುಗಲಭೆಗೆ ಕಾರಣರಾಗಿದ್ದವರನ್ನು ರಕ್ಷಿಸುವ ಸಲುವಾಗಿ, ಮುಂಬರುವ ಲೋಕಸಭಾ ಚುನಾವಣಾ ಗಿಮಿಕ್‌ಗಾಗಿ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯನ್ನು ಬಲಿಕೊಡಲು ಹೊರಟಿರುವುದು ಅತ್ಯಂತ ಕೀಳು ಮಟ್ಟದ ರಾಜಕಾರಣ ಎಂದು ದಲಿತಪರ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ದಕ್ಷ ಪೊಲೀಸ್ ಅಧಿಕಾರಿ ಲಕ್ಷ್ಮಣ್ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡಿದಲ್ಲಿ, ಟೀಕೆ-ಟಿಪ್ಪಣಿ ಮಾಡಿದಲ್ಲಿ  ಯಾರೇ ಆಗಿದ್ದರೂ ಸರಿ, ಅವರ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘು,  ಮರಳೂರು ಕೃಷ   ಮೂರ್ತಿ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಬಿ. ಶಾಂತರಾಜು, ಡಿಎಸ್‌ಎಸ್ ತಾಲೂಕು ಸಂಚಾಲಕ ನರಸಯ್ಯ ಯಲ್ಲಾಪುರ, ಡಿಎಸ್‌ಎಸ್ (ಮೂರ್ತಿ ಬಣ) ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ, ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಹೆಬ್ಬಾಕ ರಮೇಶ್, ದಲಿತ ಸೇನೆ ಜಿಲ್ಲಾಧ್ಯಕ್ಷ ಸಿದ್ದರಾಜು, ದಲಿತ ಸ್ವಾಭಿಮಾನಿ ಸಂಘಟನೆ ಸಂಚಾಲಕರಾದ ಭಾನುಪ್ರಕಾಶ್, ಕೆಂಪರಾಜು, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಜಿ.ಗಣೇಶ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಎನ್.ಬಿ. ಸೋಮಶೇಖರ್, ಮಾದಿಗ ದಂಡೋರ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಟೋ ಶಿವರಾಜ್, ದಲಿತ ಸಾಮ್ರಾಜ್ಯ ಸಮಿತಿ ಜಿಲ್ಲಾಧ್ಯಕ್ಷ ಎ. ನಾಗೇಶ್, ದಲಿತ ವಿಮೋಚನಾ ಸೇನೆ ಜಿಲ್ಲಾಧ್ಯಕ್ಷ ರಾಮಕೃಷ   ಯ್ಯ, ಸಮತಾ ಸೈನಿಕಾ ದಳ ಜಿಲ್ಲಾಧ್ಯಕ್ಷ ಧನರಾಜ್,  ಹಾಗೂ ಮುಖಂಡರಾದ ಜೆ.ಕೆ. ಸಮೀ, ರಾಮಚಂದ್ರಯ್ಯ, ರಂಜನ್, ಕೆ.ಟಿ. ಮಾರುತಿ ಪ್ರಸಾದ್ ಇತರರು ಪ್ರತಿಭಟನೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement