ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಿರೇಮಠ್‌ಗೆ ದಾಖಲೆ ಪ್ರದರ್ಶಿಸುವುದೇ ಹವ್ಯಾಸ: ಸಂಸದ ಡಿ.ಕೆ. ಸುರೇಶ್

Mainashree
Updated On : 6 Jan 2014, 11:06 am

ಕುಣಿಗಲ್: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಅವರಿಗೆ ದಾಖಲೆಗಳನ್ನು ಪ್ರದರ್ಶಿಸುವುದೇ ಸ್ವಾಭಾವಿಕ ಗುಣವಾಗಿದೆ. ತಮ್ಮ ಹಾಗೂ ತಮ್ಮ ಸಹೋದರ ಡಿ.ಕೆ.ಶಿವಕುಮಾರ್ ವಿರುದ್ಧ ಮಾಡಿರುವ ಯಾವುದೇ ಆರೋಪಗಳಲ್ಲಿ ಹುರುಳಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಸೋಮವಾರ ಯಡೆಯೂರು ಹೋಬಳಿ ವಿವಿಧ ಗ್ರಾಮಗಳ ಜನಸಂಪರ್ಕ ಸಭೆಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿ, ಹಿರೇಮಠ್ ಮಾಡಿರುವ ಆರೋಪಗಳೆಲ್ಲವೂ ನ್ಯಾಯಾಲಯದಲ್ಲಿವೆ. ಈ ಎಲ್ಲಾ ಪ್ರಕರಣಗಳಲ್ಲೂ ನ್ಯಾಯಾಲಯದಿಂದ ದೋಷಮುಕ್ತರಾಗಿ ಬರುತ್ತೇವೆ. ಹಿರೇಮಠ್ ಮಾಡಿರುವ ಆರೋಪಗಳನ್ನು ವಿರೋಧಪಕ್ಷದವರು ಪ್ರಚಾರ ಕೊಡುತ್ತಾ, ಪರೋಕ್ಷವಾಗಿ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದ ಅವರು, ಕೆಜೆಪಿಯು ಬಿಜೆಪಿಯಲ್ಲಿ ವಿಲೀನವಾಗಿ, ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಮುನ್ನಡೆಗೆ ತೊಡಕಾಗುವುದಿಲ್ಲ. ಅವರ ಹೋರಾಟ ಅವರಿಗೆ, ನಮ್ಮ  ಹೋರಾಟ ನಮಗೆ. ಅತ್ಯಲ್ಪವಧಿಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದ್ದು, ಅನುದಾನವನ್ನು ಆದಷ್ಟು ಶೀಘ್ರವಾಗಿ ಬಿಡುಗಡೆಗೆ ಕ್ರಮ ಕೈಗೊಂಡು ಮಾಡಿರುವ ಅಭಿವೃದ್ಧಿ ಕೆಲಸಗಳ ಜೊತೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement