ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿರಂತರ ನೀರು ಸರಬರಾಜು ಯೋಜನೆಗೆ ವರದಿ ಸಿದ್ಧ

Vishwanath S
Updated On : 10 Jan 2014, 12:59 pm

ತುಮಕೂರು: ತುಮಕೂರು ನಗರದಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ಅಳವಡಿಸಲು 198.98 ಕೋಟಿ ರು. ಗಳಿಗೆ ಯೋಜನಾ ವರದಿ ತಯಾರಿಸಲಾಗಿದೆ.
ಈ ಯೋಜನೆಯನ್ನು ಕೇಂದ್ರ ಸರ್ಕಾರದ ಪುರಸ್ಕೃತ ಯುಐಡಿಎಸ್‌ಎಸ್‌ಎಂಟಿ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಲಾಗಿದ್ದು ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ.
ಯೋಜನೆಯಡಿ ನಗರ ಪ್ರದೇಶವನ್ನು 37 ಡಿಎಂಎ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟು 539 ಕಿ.ಮೀ. ಉದ್ದ ವಿವಿಧ ವ್ಯಾಸದ ಕೊಳವೆ ಮಾರ್ಗ ಅಳವಡಿಸಿ ಗೃಹ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಯೋಜನೆಯಲ್ಲಿ ಶಿಥಿಲಗೊಂಡಿರುವ ಓಹೆಚ್‌ಟಿ ಗಳನ್ನು ಪುನರ್ ನಿರ್ಮಾಣ ಮಾಡಲು ಸಹ ಯೋಜಿಸಲಾಗಿದೆ ಎಂದರು.
ಜೆಡಿಎಸ್ ಸಭೆ ಇಂದು
ತುಮಕೂರು: ಜಿಲ್ಲಾ ಜೆಡಿಎಸ್ ಮಹಿಳಾ ಘಟಕವನ್ನು ಪುನರಾಚನೆ ಮಾಡುವ ಸಂಬಂಧ ಜ.10 ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ವಿಭಾಗದ ಸಭೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. 10 ತಾಲೂಕುಗಳ ಎಲ್ಲಾ ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯ್ತಿ ಮಹಿಳಾ ಪ್ರತಿನಿಧಿಗಳು, ತಾಲೂಕಪ ಪಂಚಾಯ್ತಿ ಮಹಿಳಾ ಪ್ರತಿನಿಧಿಗಳು, ಜಿಲ್ಲಾ ಪಂಚಾಯಿತಿ ಮಹಿಳಾ ಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಮಹಿಳಾ ಸದಸ್ಯರು, ನಗರ ವ್ಯಾಪ್ತಿಯ ಮಹಿಳಾ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತೆಯರು ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ
ಚಿಕ್ಕನಾಯಕನಹಳ್ಳಿ:  2014-15ನೇ ಸಾಲಿಗೆ 1ನೇ ತರಗತಿ ಅಥವಾ ಎಲ್‌ಕೆಜಿ ತರಗತಿಗಳಿಗೆ ಮಕ್ಕಳ ಶಿಕ್ಷಣ ಅಧಿನಿಯದಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ತಿಳಿಸಿದ್ದಾರೆ. ಕಡ್ಡಾಯ ಶಿಕ್ಷಣ ಹಕ್ಕು 2009ರ ರೀತ್ಯ  2014-15ನೇ  ಸಾಲಿಗೆ 1ನೇ ತರಗತಿ ಅಥವಾ ಎಲ್‌ಕೆಜಿ ತರಗತಿಗೆ ದಾಖಲಾತಿಗಾಗಿ ವಾರ್ಷಿಕ ಆದಾಯ ರು.3,50,000-00 ಕ್ಕಿಂತ ಕಡಿಮೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಹ ಪೋಷಕರು 7-1-2014 ರಿಂದ  8-2-2014 ರವರಗೆ ತಮ್ಮ ನೆರೆಹೊರೆಯ ಶಾಲೆಗಳಿಂದ ಅರ್ಜಿ ಪಡೆದು ಮಗುವಿನ ಜನ್ಮ ದೃಢೀಕರಣ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣದೊಂದಿಗೆ ಅದೇ ಶಾಲೆಗೆ ಅರ್ಜಿ ಸಲ್ಲಿಸುವುದು. ಇದಕ್ಕೆ  ಸಂಬಂಧಿಸಿದ ವಿವರವಾದ ಮಾಹಿತಿಯು ಇಲಾಖೆಯ ವೆಬ್‌ಸೈಟ್ ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ನಲ್ಲಿಯೂ ಲಭ್ಯವಿರುತ್ತದೆಂದೂ ಹಾಗೂ ಆರ್‌ಟಿಇ ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸಂಖ್ಯೆ 1800-425-11032 ಇದಕ್ಕೆ ಸಂಪರ್ಕಿಸಬಹುದಾಗಿದೆ.
ಸ್ಮರಣ ಸಂಚಿಕೆಗೆ ಬರಹಗಳ ಆಹ್ವಾನ
ತುರುವೇಕೆರೆ: ಫೆಬ್ರವರಿ 10 ಮತ್ತು 11 ರಂದು ತುರುವೇಕೆರೆಯಲ್ಲಿ ನಡೆಯಲಿರುವ ಜಿಲ್ಲೆಯ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿರುವ ಸ್ಮರಣ ಸಂಚಿಕೆಗೆ ಜಿಲ್ಲೆಯ ಲೇಖಕರಿಂದ ಬರಹಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಕಥೆ, ಕವನ, ವೈಚಾರಿಕ ಲೇಖನ, ವಿಮರ್ಶೆ, ಪುಸ್ತಕ ಪರಿಚಯ, ಪ್ರಬಂಧ, ಜಿಲ್ಲೆಯ ಸಾರಸ್ವತ ವೈಭವವನ್ನು ಸಾರುವ ಬರಹಗಳನ್ನು ಕಳಿಸಬಹುದಾಗಿದೆ. ಜ. 16 ರೊಳಗೆ ತುರುವೇಕೆರೆ ಪ್ರಸಾದ್, ಪಂಚವಟಿ, ಗಾಂಧಿನಗರ, ತುರುವೇಕೆರೆ 572 227ಗೆ ಕಳಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಎಸ್. ದೇವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ರಾಷ್ಟ್ರೀಯ ಸಮ್ಮೇಳನ
ತಿಪಟೂರು: ಪಟ್ಟಣದ ಕಲ್ಪತರು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಗ್ರಂಥಾಲಯ ಪಾತ್ರ ಮತ್ತು ಮಹತ್ವದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಇಂದು ಮತ್ತು ನಾಳೆ ಬೆಳಗ್ಗೆ 10ಗಂಟೆಗೆ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ರೇವಾ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ವಿ.ಜಿ. ತಳವಾರ ಉದ್ಘಾಟನೆ ನೆರವೇರಿಸಲಿದ್ದು, ಸಮ್ಮೇಳನದ ನಿರ್ದೇಶಕರಾಗಿ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಪ್ರೊ. ಪಿ.ಜಿ.ತಡಸದ ನೇತೃತ್ವವಹಿಸಲಿದ್ದಾರೆ.  ಕೆವಿಎಸ್ ಅಧ್ಯಕ್ಷ ಎನ್.ಬಸವಯ್ಯ ಅಧ್ಯಕ್ಷತೆ  ವಹಿಸಲಿದ್ದಾರೆ. ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಜ.11ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗ ಮುಖ್ಯಸ್ಥ ಡಾ.ಬಿ.ಡಿ.ಕುಂಬಾರ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಮತ್ತು ಗ್ರಂಥಪಾಲಕ ಡಾ.ಮಲ್ಲಿಕಾರ್ಜುನ ಬಾಚಲಾಪುರ ಭಾಗವಹಿಸಲಿದ್ದು, ಅಧ್ಯಕ್ಷತೆ ಪ್ರಾಂಶುಪಾಲ ಡಾ. ಎಸ್.ಎಂ. ಶಶಿಧರ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಸುಮಾರು 100 ಜನ ಗ್ರಂಥಪಾಲಕರು ಭಾಗವಹಿಸಿ ವಿಷಯ ವಿಮರ್ಶೆ-ಚಿಂತನೆ ನಡೆಸಲಿದ್ದಾರೆ.
ಇಂದು ಸಂಕಿರಣ
ತಿಪಟೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ಜಾಗೃತಿ ಶಿಬಿರ ಹಾಗೂ ಕೈಗಾರಿಕಾ ವಿಚಾರ ಸಂಕಿರಣ ಮತ್ತು 2009-14ರ ಕೈಗಾರಿಕಾ ನೀತಿಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾಲೂಕಿನ ಕೋಟೆನಾಯಕನಹಳ್ಳಿಯ ರುದ್ರಮುನಿ ಸ್ವಾಮೀಜಿ ರೂರಲ್ ಎಜುಕೇಷನ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಜ.10ರಂದು ಬಳಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ ಎಂದು ಕೈಗಾರಿಕಾ ವಿಸ್ತರಣಾಧಿಕಾರಿ ಜಿ.ಕೆ.ಉಮಾಶಂಕರಯ್ಯ ತಿಳಿಸಿದ್ದಾರೆ. ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಕೆ.ಷಡಕ್ಷರಿ ಉದ್ಘಾಟನೆ ನೆರವೇರಿಸಲಿದ್ದಾರೆ. ತಾಪಂ ಅಧ್ಯಕ್ಷ ಕೆ.ರಾಜು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದೇಶಕ ಪಿ.ಹೆಚ್.ಮುಕುಂದಕೃಷ್ಣೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ.
ತರಗತಿ ಪ್ರಾರಂಭ
ತಿಪಟೂರು: ಪಟ್ಟಣದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರದಲ್ಲಿ ಪ್ರಥಮ, ದ್ವಿತೀಯ, ಅಂತಿಮ ಬಿ.ಎ ವಾರಾಂತ್ಯ ಸಮಾಲೋಚನಾ ತರಗತಿಗಳು ಇಂದಿನಿಂದ ಏಪ್ರಿಲ್ ಎರಡನೇ ವಾರದವರೆಗೆ ಪ್ರಾರಂಭವಾಗಲಿವೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಪ್ರೊ.ಸೈಯದ್ ಮುಷ್ತಾಕ್ ಅಹಮದ್ ಮತ್ತು ಸಹ ಸಂಯೋಜಕರಾದ ಡಾ.ಆರ್.ಎಸ್. ಸದಾಶಿವಯ್ಯ ಮೊ.9449424001

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement