'ಯುವಶಕ್ತಿ ಸಂಘಟಿತರಾಗಲಿ'
ಕ.ಪ್ರ. ವಾರ್ತೆ , ಕೊರಟಗೆರೆ , ಜ. 9
ಒಂದು ಸಮಾಜ ಮುಂದೆ ಬರಬೇಕಾದರೆ ಅಲ್ಲಿ ಎಲ್ಲರನ್ನು ಪ್ರೀತಿಸುವ ಗುಣಗಳಿರಬೇಕು ಎಂದು ಜಿಪಂ ಸದಸ್ಯ ಪ್ರಸನ್ನಕುಮಾರ್ ತಿಳಿಸಿದರು.
ಅವರು ಪ್ರವಾಸಿ ಮಂದಿರದಲ್ಲಿ ಒಕ್ಕಲಿಗ ಯುವಜನ ಟ್ರಸ್ಟ್ ಹಮ್ಮಿಕೊಂಡಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಕೇವಲ ಟ್ರಸ್ಟ್ ಸ್ಥಾಪಿಸುವುದು ಮುಖ್ಯವಲ್ಲ ಅದನ್ನು ಉಳಿಸಿ ಬೆಳೆಸುವುದು ಮುಖ್ಯ ಎಂದರು.
ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು ಮಾತನಾಡಿ, ಸಮಾಜ ಹರಿದು ಹಂಚಬೇಡಿ ಸಣ್ಣ ಒಳ ಪಂಗಡ ಒಂದುಗೂಡಿಸಿಕೊಂಡು ಉತ್ತಮ ಕೆಲಸ ಮಾಡಿ ಎಂದು ತಿಳಿಸಿದರು.
ಸಿಪಿಐ ಕೆ.ಆರ್. ಚಂದ್ರಶೇಖರ್ ಮಾತನಾಡಿ, ಯುವಕರು ಸ್ಥಾಪಿಸಿರುವಂತಹ ಟ್ರಸ್ಟ್ ಇನ್ನೊಂದು ಜಾತಿ ಮತ್ತು ಸಮುದಾಯವನ್ನು ತುಳಿಯುವಂತ ಕೆಲಸ ಮಾಡದೇ ಎಲ್ಲಾ ಸಮುದಾಯದವರೊಂದಿಗೆ ಒಂದು ಗೂಡಿ ಸಹಬಾಳ್ವೆಯನ್ನು ನಡೆಸುವಂತಹ ಪ್ರಯತ್ನ ಮಾಡಬೇಕು ಎಂಬುದು ಟ್ರಸ್ಟ್ ಆಶಯವಾಗಿರಬೇಕು ಎಂದು ಹೇಳಿದರು.
ಮುಖಂಡ ಮಹಾಲಿಂಗಪ್ಪ ಮಾತನಾಡಿ, ಸಂಘಟನೆಯಲ್ಲಿ ಶಕ್ತಿ ಇರುತ್ತದೆ ಆದ್ದರಿಂದ ಸಂಘಟನೆಗೆ ಆದಾಯದ ಮೂಲ ಮಾಡಿಕೊಂಡು ಎಲ್ಲಾ ಸದಸ್ಯರು ತಾಳ್ಮೆಯಿಂದ ವರ್ತಿಸಿದಲ್ಲಿ ಟ್ರಸ್ಟ್ ಉತ್ತಮವಾಗಿ ಬೆಳೆಯುತ್ತದೆ ಎಂದರು.
ತಾಪಂ ಸದಸ್ಯರಾದ ಜಿ.ಎಲ್. ಹನುಮಂತರಾಯಪ್ಪ, ಎಲ್.ವಿ. ಪ್ರಕಾಶ್, ಲೋಕೇಶ್, ಸಾಕರಾಜು, ರವಿಕುಮಾರ್, ಬಸವರಾಜು, ಗ್ರಾಪಂ ಅಧ್ಯಕ್ಷರಾದ ಮಂಜುನಾಥ್, ಶಿವರಾಮ್, ಕಸಪಾ ತಾಲೂಕು ಅಧ್ಯಕ್ಷ ಎಸ್.ಕೆ. ನಾಗರಾಜು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಚಂದ್ರಯ್ಯ, ಮುಖಂಡರಾದ ಎಲ್. ರಾಜಣ್ಣ, ನಟೇಶ್, ಶಿವಕುಮಾರ್, ದಿವ್ಯಪ್ರಸಾದ್, ನಾಗೇಶ್, ವಾಸುದೇವರಾಜು, ಇಒ ಮಂಜುನಾಥ್ ಇತರರು ಹಾಜರಿದ್ದರು.