7ನೇ ಘಟಿಕೋತ್ಸವಕ್ಕೆ ವಿವಿ ಸಜ್ಜು
ತುಮಕೂರು ವಿವಿಯ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆಯಲಿರುವ ಈ ಘಟಿಕೋತ್ಸವದಲ್ಲಿ ನಾಲ್ವರಿಗೆ ಗೌರವ ಡಾಕ್ಟರೇಟ್, 13 ಮಂದಿಗೆ ಡಿಲಿಟ್, 8 ಮಂದಿಗೆ ಡಿಎಸ್ಸಿ, 6 ಮಂದಿಗೆ ಪಿಎಚ್‌ಡಿ, 1123 ಸ್ನಾತಕೋತ್ತರ ಹಾಗೂ 6739 ಮಂದಿಗೆ ಪದವಿ ಪ್ರದಾನ ಮಾಡಲಾಗುವುದು. 32 ಮಂದಿಗೆ 38 ಚಿನ್ನದ ಪದಕ ಹಾಗೂ ಒಬ್ಬ ವಿದ್ಯಾರ್ಥಿಗೆ ನಗದು ಬಹುಮಾನ ನೀಡಲಾಗುವುದು.
ಹಾಗೆಯೇ ಸ್ನಾತಕೋತ್ತರ ಪದವಿಯಲ್ಲಿ 5 ಮಂದಿಗೆ ಚಿನ್ನದ ಪದಕ, 10 ಮಂದಿ ಪದವೀಧರರಿಗೆ, 5 ಮಂದಿ ಬಿಎಫ್‌ಎ, ಬಿಪಿಎಡ್, ಬಿಎ ಪದವೀಧರರು, ಬಿಕಾಂನ 3 ಮಂದಿಗೆ, ಕನ್ನಡ ಪಂಡಿತನ ನಾಲ್ವರಿಗೆ ಚಿನ್ನದ ಪದಕ ನೀಡಲಾಗುವುದು ಎಂದು ಕುಲಪತಿ ಪ್ರೊ. ಎ.ಎಚ್. ರಾಜಾಸಾಬ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಕೃತದಲ್ಲಿ ಎಚ್.ವಿ. ನಾಗರಾಜರಾವ್ ಮತ್ತು ಪ್ರೊ. ರಾಮಚಂದ್ರ ಜಿ. ಭಟ್, ಕನ್ನಡದಲ್ಲಿ ಡಾ. ಗೀತಾ ವಸಂತ, ಎಚ್.ವೈ. ಈಶ್ವರ್, ಡಾ. ಪ್ರಧಾನ ಗುರುದತ್ತ ಮತ್ತು ಪ್ರೊ.. ಮೈಸೂರು ನಾಗಮಣಿ ಶ್ರೀನಾಥ್, ಇಂಗ್ಲಿಷ್‌ನಲ್ಲಿ ಪ್ರೊ. ಜಿ.ಎಸ್. ಮುಡಂಬಡಿತ್ತಾಯ ಅವರಿಗೆ ಜೈವಿಕ ತಂತ್ರಜ್ಞಾನ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಜಿ.ಎನ್. ಶ್ರೀಕಂಠಯ್ಯ, ರಾಜ್ಯಶಾಸ್ತ್ರದಲ್ಲಿ ಎ. ಸೂರ್ಯಪ್ರಕಾಶ್, ಇತಿಹಾಸದಲ್ಲಿ ಎನ್. ಪ್ರಸನ್ನಕುಮಾರ್, ಇಂಡಾಲಜಿಯಲ್ಲಿ ಡಾ. ಪಪ್ಪು ವೇಣುಗೋಪಾಲರಾವ್ ಅವರಿಗೆ ಡಿ.ಲಿಟ್ ಪದವಿ ನೀಡಲಾಗುವುದು.
ಹಾಗೆಯೇ ಮೊಹಮದ್ ಮಕ್ಸೂದ್ ಅಹಮದ್, ಡಾ. ಎಚ್. ನಾಗಭೂಷಣ್, ಕೆ.ಎಸ್. ಹರಿಶಾನಂದ ಅವರಿಗೆ ವಸ್ತು ವಿಜ್ಞಾನದಲ್ಲಿ ಡಿಎಸ್ಸಿ ಪದವಿ ಲಭಿಸಿದರೆ ಡಾ. ಎಸ್.ಎ. ಹರಿಪ್ರಸಾದ್ ಮತ್ತು ವಿಜಯಸಿಂಗ್ ಅವರಿಗೆ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಎಸ್ಸಿ ಪದವಿ ಲಭಿಸಿದೆ. ಹಾಗೆಯೇ ಪಿ. ಸದಾನಂದ ಮಯ್ಯ ಅವರಿಗೆ ಆಹಾರ ವಿಜ್ಞಾನದಲ್ಲಿ ಡಿಎಸ್ಸಿ ಪದವಿ ನೀಡಿದರೆ, ಗಣಕ ವಿಜ್ಞಾನದಲ್ಲಿ ರಾಜಸಿಂಹ ಹಾಗೂ ರಸಾಯನಶಾಸ್ತ್ರದಲ್ಲಿ ಎಸ್. ಶ್ರೀನಿವಾಸ ಅವರಿಗೆ ಡಿಎಸ್ಸಿ ಪದವಿ ಸಿಗಲಿದೆ.
ಭೌತಶಾಸ್ತ್ರದಲ್ಲಿ ಎಚ್.ಬಿ. ಪ್ರೇಮಕುಮಾರ್, ಆಹಾರ ವಿಜ್ಞಾನದಲ್ಲಿ ಎಸ್.ಜೆ. ಪ್ರಶಾಂತ್, ಭೌತಶಾಸ್ತ್ರ ಡಿ.ವಿ. ಸುನಿತಾ, ತುಂಗಾಮಣಿ ಎಂ. ಕೇಶವಪ್ರಸನ್ನ ಮತ್ತು ಆರ್. ಸವಿತ ಗಣಕ ವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಲಭಿಸಿದೆ.