ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಡಬ ಕೆರೆಗೆ ನೀರು ಹರಿಸದ್ದಕ್ಕೆ ಆಕ್ರೋಶ

Vishwanath S
Updated On : 12 Jan 2014, 1:21 am

ಗುಬ್ಬಿ: ತಾಲೂಕಿನ ಪ್ರಮುಖ ಕೆರೆ ಎನಿಸಿದ ಕಡಬ ಕೆರೆಗೆ ಕಳೆದ ಮೂರು ವರ್ಷದಿಂದ ಹೇಮಾವತಿ ನೀರು ಹರಿಯದೆ ಇಲ್ಲಿನ ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಈ ಬಗ್ಗೆ ಹೇಮಾವತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ಕಡಬ ಗ್ರಾಮಸ್ಥರು ನಿಟ್ಟೂರು ಸಮೀಪದ ಹೇಮಾವತಿ ಎಸ್ಕೇಪ್ ಗೇಟ್ ಬಳಿ ಧರಣಿ ನಡೆಸಿ ಕೂಡಲೇ ನೀರು ಹರಿಸುವಂತೆ ಆಗ್ರಹಿಸಿದರು.
ಎಸ್ಕೇಪ್ ಬಳಿ ಜಮಾಯಿಸಿದ ನೂರಾರೂ ರೈತರು ಗೇಟ್ ಬಳಿ ಕುಳಿತು ಗೇಟ್ ತೆರೆಯುವಂತೆ ಒತ್ತಾಯಿಸಿದರು. ಕಡಬ ಕೆರೆಯನ್ನು ನಂಬಿದ ಈ ಭಾಗದ ರೈತರ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶ ಕೃಷಿ ನಡೆಸಲಾಗದ ಸ್ಥಿತಿಯಲ್ಲಿದ್ದಾರೆ. ಕಳೆದ 4 ತಿಂಗಳಿಂದ ಹೇಮಾವತಿ ತಾಲೂಕಿಗೆ ಹರಿಯುತ್ತಿದ್ದರೂ, ಕಡಬ ಕೆರೆಗೆ ಮಾತ್ರ ಶೇ.20 ರಷ್ಟು ನೀರು ಬಂದಿಲ್ಲ ಎಂದು ಆರೋಪಿಸಿದ ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ ಹಾಗೂ ವಕೀಲ ಬಿ.ಬಾಲಾಜಿ, ಹೇಮಾವತಿ ನೀರು ಹರಿಸುವಲ್ಲಿ ಅಧಿಕಾರಿಗಳು ತಾರಮತ್ಯ ನೀತಿ ಪಾಲಿಸುತ್ತಿದ್ದಾರೆ. ನೀರಿಗಾಗಿ ದೂರವಾಣಿ ಮೂಲಕ ಪ್ರಶ್ನಸಿದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಮಾರು 4 ತಾಸು ಧರಣಿ ನಡೆಸಿದ ಸ್ಥಳಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಭೇಟಿ ನೀಡಿ ಜ.17 ರಿಂದ ಕಡಬ ಕೆರೆಗೆ ನೀರು ಹರಿಸುವ ಭರವಸೆ ನೀಡಿದ ಬಳಿಕ ಕಡಬ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು. ಸಿಪಿಐ ಕುಮಾರಪ್ಪ, ಪಿಎಸ್‌ಐ ಯು.ಆರ್. ಮಂಜುನಾಥ್ ಪೊಲೀಸ್ ಪಡ್ಯೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹುಚ್ಚೇಗೌಡ, ಪಾರ್ಥಸಾರಥಿ, ವೆಂಕಟೇಶಯ್ಯ, ದೊಡ್ಡೇಗೌಡ, ಹೊನ್ನಶೆಟ್ಟಿಹಳ್ಳಿ ಪ್ರೇಮಕುಮಾರ್ ಹಾಗೂ ಕಡಬ ಕೆರೆಯ ಅಚ್ಚುಕಟ್ಟುದಾರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement