ಶೇಂಗಾದಲ್ಲಿ ರೋಗ ನಿರೋಧಕ ಶಕ್ತಿ: ಖಾದರ್
ಪಾವಗಡ: ಶೇಂಗಾದಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಜೈವಿಕ ಸಂಶೋಧಕ ಖಾದರ್ ಹೇಳಿದರು.
ಕೃಷಿ ಭಾರತ್ ನೆಲೆ ಬೆಂಗಳೂರು, ಶೈಕ್ಷಣಿಕ ಜಿಲ್ಲಾ ವಿಜ್ಞಾನ ಸಮಿತಿ ಮಧುಗಿರಿ, ಸರ್ವೋದಯ ಫೌಂಡೇಷನ್ ಟ್ರಸ್ಟ್ ಪಾವಗಡ ವಿಜ್ಞಾನ ಕೇಂದ್ರ ಪಾವಗಡ ಸಂಯುಕ್ತಶ್ರಾಯದಲ್ಲಿ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ ಎಂಬ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೇಂಗಾ ಆರೋಗ್ಯಕ್ಕೆ ಉತ್ತಮ ಆಹಾರವಾಗಿದ್ದು ಜೀರ್ಣ ಕ್ರಿಯೆ ಸೇರಿದಂತೆ ಪಿಟ್ಸ್ ನಿವಾರಿಸುಲ ಶಕ್ತಿ ಅದಕ್ಕಿದೆ. ಅಲ್ಲದೇ ಕಡಲೇ ಬೀಜದ ಹೊರ ಪದರು ಸಮೇತ ಮೊಳೆಕೆ ಕಟ್ಟಿ ತಿಂದರೆ ರೋಗಗಳ ನಿವಾರಣೆಗೆ ಸಹಕಾರಿಯಾಗಿರುತ್ತದೆ ಎಂದರು.
ಜಮೀನುಗಳಲ್ಲಿ ಬೆಳೆಯುವ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಉತ್ಪತ್ತಿಯಾದ ಆಹಾರ ವಿಷದಿಂದ ಕೂಡಿರುತ್ತದೆ. ಇದರಿಂದ ನಾನಾ ರೀತಿಯ ಕಾಯಿಲೆಗಳನ್ನು ಎದುರಿಬೇಕಾಗಿದೆ. ಹಸು ಎಮ್ಮೆಯಂತಹ ಹಾಲು ಕೊಡುವ ಪ್ರಾಣಿಗಳಿಗೆ ಹಾಲಿನ ಉತ್ಪತ್ತಿ ಹೆಚ್ಚಿಸುವ ಹಿನ್ನೆಲೆಯಲ್ಲಿ ಚಿಕಿತ್ಸೆ ಕೊಡುವುದೂ ಅಪಾಯಕಾರಿಯೇ ಎಂದರು. ರೈತರಿಗೆ ಪರ್ಯಾಯ ಬೆಳೆಗಳ ಬಗ್ಗೆ ಸುದೀರ್ಘವಾಗಿ ವಿವರಿಸಿ ಅನೇಕ ಸಲಹೆ ನೀಡಿದರು. ಎಸ್ಎಸ್ಕೆ ಸಂಘದ ಅಧ್ಯಕ್ಷ ಜಿ.ಎಸ್. ಧರ್ಮಪಾಲ್, ವಕೀಲ ಎಂ. ನಾಗೇಂದ್ರಪ್ಪ, ಪ್ರಾಚಾರ್ಯರಾದ ಎನ್.ಇಂದಿರಮ್ಮ, ಸಂಪಾದಕ ಸಿ.ಯತಿರಾಜ್ ಹಾಗೂ ಸರ್ವೋದಯ ಟ್ರಸ್ಟ್ನ ಅಧ್ಯಕ್ಷ ವಕೀಲ ರಾಮಾಂಜಿನೇಯ, ಕಟ್ಟಾ ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.