ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ'

Vishwanath S
Updated On : 15 Jan 2014, 1:16 am

ತಿಪಟೂರು: ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರತರುವಲ್ಲಿ ಭಾವಗೀತೆ ಮತ್ತು ಜನಪದಗೀತೆಗಳ ಸ್ಪರ್ಧೆಯೂ ಒಂದಾಗಿದ್ದು, ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ತಿಳಿಸಿದರು.
ಪಟ್ಟಣದ ಠಾಗೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ.ಡಿ.ರಾಜಲಕ್ಷ್ಮಿ ಮತ್ತು ಜೆ.ಹರ್ಷ ಜ್ಞಾಪಕಾರ್ಥ ತಾಲೂಕು ಮಟ್ಟದ ಭಾವಗೀತೆ ಮತ್ತು ಜನಪದ ಗೀತೆ ಸ್ಪರ್ಧೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವ ಮೂಲಕ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬಹುದು. ಇಂತಹ ಉತ್ತಮ ಕಾರ್ಯಕ್ರಮವನ್ನು ಈ ಶಾಲೆಯು ಕಳೆದ 22 ವರ್ಷಗಳಿಂದಲೂ ನಡೆಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಠಾಗೂರು ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಡಿ.ರಾಮಯ್ಯ ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ, ಸಂಯಮದಿಂದ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಿ ಶಾಲೆಗೆ ಮತ್ತು ಪೋಷಕರಿಗೆ ಉತ್ತಮ ಹೆಸರು ತಂದುಕೊಡಬೇಕೆಂದರು.
ನಿವೃತ್ತ ಪ್ರಾಂಶುಪಾಲ ಬಿ. ಜಯರಾಂ ವಿಜೇತ ಸ್ಪರ್ಧಿಗಳಿಗೆ ಬಹುಮಾನ ನೀಡಿದರು. ಸ್ಪರ್ಧೆಯಲ್ಲಿ ಸೆಂಟ್ರಲ್ ಶಾಲೆ ಹೆಚ್ಚು ಅಂಕ ಪಡೆದು ಪರ್ಯಾಯ ಪಾರಿತೋಷಕ ತನ್ನದಾಗಿಸಿಕೊಂಡಿತು.
  ಶಿವಮೂರ್ತಿ, ಬಿ.ಆರ್.ಸಿ.ಪ್ರಭು, ಮುಖ್ಯ ಶಿಕ್ಷಕಿ ಬಿ.ಸಿ.ಗೀತಾ, ಪ್ರೌಢಶಾಲೆಯ ಕೆ.ಶಶಿಕಲಾ ಅನಿಲ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರಿದ್ದರು.
 ರಂಗಕಲಾಕೌಸ್ತುಭ ಪ್ರಶಸ್ತಿ ಪುರಸ್ಕೃತ ಬಿ. ಶಿವಲಿಂಗಪ್ಪ, ರಂಗಭೂಮಿ ಕಲಾವಿದೆ ಸಾವಿತ್ರಮ್ಮ, ಗಾಯಕ ಎಂ.ನಿಂಗಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಸ್ಪರ್ಧಿಗಳಿಗೆ ಉತ್ತಮ ತೀರ್ಪು ನೀಡಿದರು.  ಮುಖ್ಯಶಿಕ್ಷಕಿ ಎಸ್. ಸಾವಿತ್ರಿ ಹೆಗಡೆ ಸ್ವಾಗತಿಸಿ, ಶಿವಗಂಗಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement