ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹುಚ್ಚಯ್ಯ ದಲಿತರ ಪ್ರಶ್ನಾತೀತ ನಾಯಕ

Vishwanath S
Updated On : 15 Jan 2014, 1:17 am

ತುಮಕೂರು: ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಅವರು ದಲಿತರ ಪ್ರಶ್ನಾತೀತ ನಾಯಕ ಎಂದು ಮಾದಿಗ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ವಿ. ರವಿವರ್ಮ ಬಣ್ಣಿಸಿದ್ದಾರೆ.
ಅವರು ಇಲ್ಲಿನ ಮಕ್ಕಳ ಮಂದಿರದಲ್ಲಿ ಮಾದಿಗ ವಿದ್ಯಾರ್ಥಿ ಪರಿಷತ್‌ನ ವತಿಯಿಂದ ವೈ.ಎಚ್. ಹುಚ್ಚಯ್ಯ ಅವರ 60 ನೇ ವರ್ಷದ ಹುಟ್ಟಹಬ್ಬದಲ್ಲಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಚ್ಚಯ್ಯ ಅವರ ಸಮಾಜ ಸೇವೆ ಅನನ್ಯವಾದುದು. ಬಡವರ, ಹಿಂದುಳಿದವರ, ವಿದ್ಯಾವಂತರ, ದೀನದುರ್ಬಲರ, ಗ್ರಾಮೀಣ ಭಾಗದ ಅಸಂಖ್ಯಾತ ಸಮುದಾಯದ ಒಡನಾಡಿಯಾಗಿ ಹಿಂದುಳಿದವರ ನಾಯಕರಾಗಿ ಇವರ ಸೇವೆ ಮಹತ್ತರವಾದುದು ಎಂದರು.
ಇಂದಿನ ಯುವಪೀಳಿಗೆಗೆ ಮಾರ್ಗದರ್ಶನ ಒಳಮೀಸಲಾತಿಯ ಮುಂಚೂಣಿಯ ಹೋರಾಟ ನಮ್ಮೆಲ್ಲರಿಗೂ ದಾರಿದೀಪವಾಗಬೇಕು. ಇವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜ ಕಾರ್ಯ ಮಾಡಲು ಆಶಿಸಿದರು.
ಮಾದಿಗ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜು, ಮಾದಿಗ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಸುನಿಲ್ ಆರ್, ಚಿರಂಜೀವಿ, ಶಶಿಭೂಷಣ್, ಕೃಷ್ಣಯಾದವ್, ಯುವ ವೇದಿಕೆ ಅಧ್ಯಕ್ಷ ಜಿ. ರಾಘವೇಂದ್ರ, ಹರೀಶ್, ಸಿ. ಶಿವಣ್ಣ ಇದ್ದರು. ಕಾವ್ಯ ಪ್ರಾರ್ಥಿಸಿ, ಹರೀಶ್ ಸ್ವಾಗತಿಸಿ ಸುನಿಲ್ ನಿರೂಪಿಸಿ ಚಿರಂಜೀವಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement