ನಕಾರಾತ್ಮಕ ಚಿಂತನೆ ದೂರವಾಗಲು ದೇವರ ಆರಾಧನೆ ಮುಖ್ಯ: ಶಾಸಕ
ಕೊರಟಗೆರೆ: ಮನುಷ್ಯರಲ್ಲಿ ನಕಾರಾತ್ಮಕ ಚಿಂತನೆಗಳು ದೂರವಾಗಿ ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರತಿಯೊಬ್ಬರೂ ದೇವಾಲಯಗಳಿಗೆ ಭೇಟಿ ನೀಡಿ ದೇವರ ಆರಾಧನೆ ಮಾಡವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದರು.
ಅವರು ತಾಲೂಕಿನ ಬುಕ್ಕಪಟ್ಟಣದ ದೊಡ್ಡಮ್ಮ ತಾಯಿ ದೇವಾಲಯದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ವಿಶೇಷ ಪೂಜೆಯೊಂದಿಗೆ ದೊಡ್ಡಮ್ಮ ತಾಯಿಯ ತುಲಾಬಾರ ಕಾರ್ಯಕ್ರಮ ನಡೆಸಿ ಮಾತನಾಡಿ ಉತ್ತಮ ಜೀವನ ರೂಪಿಸಿಕೊಳ್ಳಲು ಆಧ್ಯಾತ್ಮ ದಿಕ್ಸೂಚಿಯಾಗಿದೆ ಎಂದರು.
ಪ್ರತಿಯೊಬ್ಬರು ಧರ್ಮದಿಂದ ನಡೆದಾಗ ನಾಡು ಸುಭಿಕ್ಷೆಯಿಂದ ಇರಲು ಸಾಧ್ಯ. ಧರ್ಮದ ಮಾರ್ಗ ಅನುಸರಿಸುವವರು ಕೆಟ್ಟದ್ದನ್ನು ಮಾಡಲಾರರು. ಧರ್ಮ, ಅಧರ್ಮ ಯಾವುದು ಎಂದು ಅರಿತು ಜೀವನ ಸಾಗಿಸಿದಾಗ ಬದುಕಿಗೆ ಅರ್ಥ ಬರುವುದರೊಂದಿಗೆ ಜೀವನದಲ್ಲಿ ಏನನ್ನಾದರೂ ಸಮಾಜಕ್ಕೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷೆ ಪ್ರೇಮಾ, ಸದಸ್ಯೆ ದಾಕ್ಷಾಯಿಣಿ, ಮುಖಂಡರಾದ ಎಲ್. ರಾಜಣ್ಣ, ಮಹಾಲಿಂಗಪ್ಪ, ನರಸಿಂಹರಾಜು, ರಂಗಮುತ್ತಯ್ಯ, ಕೊಡ್ಲಹಳ್ಳಿ ವೆಂಕಟೇಶ್, ಕೆ.ಎಲ್. ಆನಂದ್, ಯುವಮುಖಂಡ ಮಂಜುನಾಥ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.