ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಡ ಮಹಿಳೆಯರಿಗೆ ಉಚಿತ ಸೀರೆ ವಿತರಣೆ

Vishwanath S
Updated On : 17 Jan 2014, 1:03 am

ಮಧುಗಿರಿ: ಮಧುಗಿರಿ ತಾಲೂಕು ತಗ್ಗಿಹಳ್ಳಿ  ಶ್ರೀರಾಮಕೃಷ್ಣ ಆಶ್ರಮ ಮಠದಲ್ಲಿ ಶ್ರೀಶಾರಾದ ದೇವಿ ಉತ್ಸವದ ಪ್ರಯುಕ್ತ ಏರ್ಪಟಾಗಿದ್ದ ಸಮಾರಂಭದಲ್ಲಿ ಬೆಂಗಳೂರು-ಹಲಸೂರು ಶ್ರೀರಾಮಕೃಷ್ಣ ಮಠದ ವತಿಯಿಂದ ತಗ್ಗಿಹಳ್ಳಿ  ಅಜು-ಬಾಜಿನ ಹಂದ್ರಾಳು, ಲಕ್ಷ್ಮಯ್ಯನಪಾಳ್ಯ, ಹಾಗೂ ಗಿಡ್ಡಯ್ಯನಪಾಳ್ಯ ಗ್ರಾಮಗಳ ಎಸ್ಸಿ ಮತ್ತು ಹಿಂದುಳಿದ ವರ್ಗದ ಬಡ ಮಹಿಳೆಯರಿಗೆ ಹಲಸೂರು ಮಠದ ಶ್ರೀಸ್ವಾಮಿ ತ್ಯಾಗೀಶ್ವರನಂದಜಿ ಉಚಿತ ಸೀರೆ ವಿತರಿಸಿದರು. ತಗ್ಗಿಹಳ್ಳಿ ಮಠದ ಸ್ವಾಮಿ ಶ್ರೀರಮಾನಂದಜಿ, ಶಿರಡಿ ಸ್ವಾಮಿ ಮಹಾರಾಜ್, ಭಗತ್ ರಾಜ್ ಇದ್ದರು.  
ಕಳಸ ಪ್ರತಿಷ್ಠಾಪನ ಮಹೋತ್ಸವ
ಶಿರಾ: ಜಾತ್ರಾ ಉತ್ಸವದಲ್ಲಿ ಭಕ್ತರು  ಪಾಲ್ಗೊಳ್ಳುವುದಂದ  ಭಗವಂತ ಹೆಚ್ಚು ಸಂತೋಷಗೊಳ್ಳುತ್ತಾನೆ ಎಂದು  ನಂಜಾವಧೂತ ಸ್ವಾಮೀಜಿ ಹೇಳಿದರು  ಅವರು ತಾಲೂಕಿನ ಪಟ್ಟನಾಯಕನಹಳ್ಳಿಯ ಶ್ರೀಗುರುಗುಂಡ ಬ್ರಹ್ಮೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಳಸ ಪ್ರತಿಷ್ಠಾಪನ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಜ.22 ರಂದು ಐತಿಹಾಸಿಕ ಪ್ರಸಿದ್ಧ ಶ್ರೀಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ  ರಥೋತ್ಸವ ಅದ್ಧೂರಿಯಾಗಿ ನಡೆಯಲಿದ್ದು ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಯ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ವೈದ್ಯಾಧಿಕಾರಿ ಶ್ರೀಕಾಂತ್, ಸಿಡಿಯಪ್ಪ, ಕೃಷ್ಣಪ್ಪ, ನರಸಿಂಹಯ್ಯ, ಶಿವಣ್ಣ ಸೇರಿದಂತೆ ಹಲವಾರು ಭಕ್ತರು ಹಾಜರಿದ್ದರು.
ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶರತ್ ಆಯ್ಕೆ
ತಿಪಟೂರು: ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಶರತ್ ಕಲ್ಲೇಗೌಡನಪಾಳ್ಯ ಅತಿ ಹೆಚ್ಚು ಮತಗಳ ಅಂತರದಿಂದ ಜಯಗ
ಳಿಸಿ ಆಯ್ಕೆಯಾಗಿದ್ದಾರೆ.  ಶರತ್ ಬಹಳ ವರ್ಷಗಳಿಂದ ಪಕ್ಷ ಸಂಘಟನೆಗಾಗಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಕಳೆದ ವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶಾಸಕರಾದ ಕೆ. ಷಡಕ್ಷರಿ, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪರಮಶಿವಯ್ಯ, ನಗರ ಘಟಕದ ಅಧ್ಯಕ್ಷ ಶಶಿ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.
ಈದ್ ಮಿಲಾದ್ ಪ್ರಯುಕ್ತ ಹಣ್ಣು ಹಂಪಲು ವಿತರಣೆ
ತಿಪಟೂರು:  ಪಟ್ಟಣದ ಅಮನ್ ಇ-ಇಸ್ಲಾಂ ಸುನ್ನಿ ಮುಸ್ಲಿಂ ವೆಲ್ ಫೇರ್ ಟ್ರಸ್ಟ್ ವತಿಯಿಂದ ಮಹಮದ್ ಪೈಂಗಂಬರ್ (ಈದ್ ಮಿಲಾದ್) ಜನ್ಮದಿನಾಚರಣೆ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಕೆ.ಷಡಕ್ಷರಿ, ಸರ್ಕಲ್ ಇನ್ಸ್‌ಪೆಕ್ಟರ್ ಗಣೇಶ್, ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ. ಗಂಗಾಮಣಿ ಅವರಿಗೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸುನ್ನಿ ಟ್ರಸ್ಟ್ ಸದಸ್ಯರಾದ ಮಹಮದ್ ಗೌಸ್, ಮಹಮದ್ ಶಾಹಿದ್, ತೌಫಿಕ್ ಅಹಮದ್, ಮತ್ತಿತರರಿದ್ದರು.
ನಾಳೆಯಿಂದ ನೀನಾಸಂ ನಾಟಕಗಳ ಪ್ರದರ್ಶನ
ತಿಪಟೂರು: ಭೂಮಿ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಹಾಸ್ಯ ಚಕ್ರವರ್ತಿ ನರಸಿಂಹರಾಜು ನೆನಪಿನಲ್ಲಿ ಹೆಗ್ಗೋಡು ನೀನಾಸಂ ನಾಟಕಗಳು ಜ.18 ಮತ್ತು 19ರಂದು ಪಟ್ಟಣದ ಕೆ.ಆರ್.ಬಡಾವಣೆಯ ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ.
 ಜ.18ರಂದು ಸಂಜೆ 6.30ಕ್ಕೆ ನಾಟಕೋತ್ಸವದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ  ನೆರವೇರಿಸಲಿದ್ದು, ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜುನಾಥ್ ಎಲ್. ಬಡಿಗೇರ ನಿರ್ದೇಶನದ ಸೀತಾ ಸ್ವಯಂವರ ಮತ್ತು ಜ.19ರಂದು ಸಂಜೆ 6.30ಕ್ಕೆ ಎಂ.ಗಣೇಸ್ ನಿರ್ದೇಶನ ಗಾಂಧಿ ವಿರುದ್ಧ ಗಾಂಧಿ ನಾಟಕ ಪ್ರದರ್ಶನಗೊಳ್ಳಲಿವೆ.
ಹೆಚ್ಚಿನ ಮಾಹಿತಿಗಾಗಿ ಮೊ.9964695861 ಸಂಪರ್ಕಿಸಬಹುದೆಂದು ಭೂಮಿ ಸಾಂಸ್ಕೃತಿಕ ಅಧ್ಯಯನ ಕೇಂದ್ರ ತಿಳಿಸಿದೆ.
ನಾಳೆ ಮಿಶ್ರತಳಿ ಹಸು, ಹೆಣ್ಣು ಕರುಗಳ ಪ್ರದರ್ಶನ
ಪಾವಗಡ: ಜಿಲ್ಲಾ ಪಂಚಾಯಿತಿ ತುಮಕೂರು ಪಶುಪಾಲನಾ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಪಾವಗಡ  ವತಿಯಿಂದ ಮಿಶ್ರತಳಿ ಹಸು ಮತ್ತು ಹೆಣ್ಣು ಕರುಗಳ ಪ್ರದರ್ಶನದ ಕಾರ್ಯಕ್ರಮವನ್ನು ಜ.18ರಂದು ಶನಿವಾರ ತಾಲೂಕಿನ ಅರಸೀಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ಹಮ್ಮಿಕೊಂಡಿರುವುದಾಗಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವರಾಯಪ್ಪ ತಿಳಿಸಿದ್ದಾರೆ. ಶಾಸಕ ಕೆ.ಎಂ. ತಿಮ್ಮರಾಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು ಗ್ರಾಪಂ ಅಧ್ಯಕ್ಷೆ ಸರ್ವಮ್ಮ ಅಧ್ಯಕ್ಷತೆ ವಹಿಸುವರು.
ಸಂಸದ ಜನಾರ್ದನಸ್ವಾಮಿ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾವು, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕ್‌ರ್, ಆಗ್ನೇಯ ಶಿಕ್ಷಕರ ಕ್ಷೇತ್ರ ಸದಸ್ಯ ವೈ.ಎ.ನಾರಾಯಣಸ್ವಾಮಿ, ತಾಪಂ ಅಧ್ಯಕ್ಷೆ ರಾಧಾ ರಾಜ್‌ಗೋಪಾಲ್, ಜಿಪಂ ಸದಸ್ಯೆ ನಳಿನಮ್ಮ ಗೋವಿಂದಪ್ಪ, ತಾಪಂ ಸದಸ್ಯೆ  ಪಾರ್ವತಮ್ಮ, ನಾಗವೀಣಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಾರಪ್ಪ, ಗ್ರಾಪಂ ಉಪಾಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ಪಂಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಪರಮೇಶ್ವರ್, ತಾಪಂ ಇಒ ತಿಪ್ಪೇಸ್ವಾಮಿ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶಿರಾ ತಾಲೂಕಿಗೆ ಹಾಲಿನ ಪುಡಿ ಅವಶ್ಯ
ಶಿರಾ: ವಾರದಲ್ಲಿ ಮೂರು ದಿನ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಕ್ಷೀರ ಭಾಗ್ಯ ಯೋಜನೆಗೆ ತಿಂಗಳಿಗೆ ತಾಲೂಕಿಗೆ 8025 ಕೆಜಿ ಹಾಲಿನ ಪುಡಿ ಅವಶ್ಯವಿದ್ದು ಇದಕ್ಕೆ ತಗಲುವ ವೆಚ್ಚ 20.07 ಲಕ್ಷ ಮೀರಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ತಾಲೂಕಿನಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿರುವ 35866 ಮಕ್ಕಳಿಗೆ ಸೋಮವಾರ, ಬುಧವಾರ ಹಾಗೂ ಶನಿವಾರಗಳಂದು ಪ್ರತಿ ವಿದ್ಯಾರ್ಥಿಗೆ 150 ಎಂ.ಎಲ್. ಹಾಲು ನೀಡಲಾಗುತ್ತಿದೆ.
ಯೋಜನೆ ಆರಂಭವಾದ ಹೊಸತರಲ್ಲಿ ಸ್ವಾಗತದ ಜೊತೆಗೆ ಅಪಸ್ವರಗಳೂ ಕೇಳಿ ಬಂದಿದ್ದವು. ಶಾಲಾ ಮಕ್ಕಳಿಗೆ ಶುದ್ಧವಾದ ಹಾಲು ಕುಡಿಸುವ ಬದಲು ಅಶುದ್ಧ ಹಾಲು ಕುಡಿಸಲಾಗುತ್ತಿದೆ ಎನ್ನುವ ಅನುಮಾನಗಳಿದ್ದವು. ಆದರೆ ತಿಂಗಳು ಉರುಳಿದಂತೆ ಕ್ಷೀರ ಭಾಗ್ಯ ಯೋಜನೆಗೆ ಉತ್ತಮ ಪ್ರತಿಕ್ರಿಯೆ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದ ಮಕ್ಕಳು, ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಕಾಣ ಬರುತ್ತಿದೆ.
ಇಂದು ಜನಸ್ವಂದನ ಕಾರ್ಯಕ್ರಮ
ಪಾವಗಡ: ತಾಲೂಕಿನ ಬೂದಿಬೆಟ್ಟ ಗ್ರಾಮದ ಗ್ರಾಪಂ ಅವರಣದಲ್ಲಿ ಜ.17ರಂದು ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರ ಅಧ್ಯಕ್ಷತೆಯಲ್ಲಿ ಜನ ಸ್ವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಹಶೀಲ್ದಾರ್ ಮಹಮ್ಮದ್ ಆಲ್ತಫ್ ಪಾಷ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಜನಪರ ಸಮಸ್ಯೆಗಳು ಹಾಗೂ ಸ್ಥಳೀಯ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಗುವುದು. ಅರ್ಹರಿಗೆ ಪಿಂಚಣಿ ಅದಾಲತ್, ಮನೆ ಹಂಚಿಕೆ ಸೇರಿದಂತೆ ಇಲಾಖೆಗಳಿಂದ ವಿವಿಧ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳು ಮತ್ತು ಚೆಕ್‌ಗಳನ್ನು ವಿತರಿಸಲಾಗವುದಾಗಿ ಅವರು ತಿಳಿಸಿದ್ದಾರೆ. ಮುಖಂಡರಾದ ಎನ್. ತಿಮ್ಮಾರೆಡ್ಡಿ, ಆರ್.ಸಿ.ಅಂಜಿನಪ್ಪ, ಗೋವಿಂದಬಾಬು, ಪ್ರಸಾದ್ ರೆಡ್ಡಿ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ರೆಡ್ಡಿ, ಎಸ್.ಟಿ. ನಾಗರಾಜ್, ನರೇಂದ್ರರೆಡ್ಡಿ, ಜಿಪಂ ಸದಸ್ಯೆ ರೇಖಾ ಅಂಜನೇಯಲು, ಸಾರವಾಟಪುರ ಪ್ರಭಾಕರ್‌ರೆಡ್ಡಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement