ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಖೋಖೋ; ಆಳ್ವಾಸ್ ಪ್ರಥಮ

Vishwanath S
Updated On : 19 Jan 2014, 1:15 am

ಗುಬ್ಬಿ: ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಒಟ್ಟು 52 ತಂಡಗಳ ಆಹ್ವಾನಿತ ಖೋಖೋ ಪಂದ್ಯಾವಳಿಯನ್ನು ರಾಜ್ಯ ಖೋಖೋ ಫೆಡರೇಷನ್ ನಿಯಾಮಾನುಸಾರ ನಡೆಸಲಾಗಿದ್ದು, ಪುರುಷ ವಿಭಾಗದ ಫೈನಲ್ ಪಂದ್ಯದಲ್ಲಿ ಮೂಡಬಿದರೆ ಆಳ್ವಾಸ್ ತಂಡ ಬೆಂಗಳೂರಿನ ಪಯೋನಿಯರ್ಸ್ ತಂಡದ ಎದುರು ರೋಚಕ ಜಯ ಗಳಿಸಿದೆ. ಹಾಸನಾಂಬ ತಂಡ ತೃತೀಯ ಸ್ಥಾನ ಗಳಿಸಿದರೆ, ಅತಿಥೇಯ ಎಸ್‌ಸಿವೈಸಿ ತಂಡ ಚತುರ್ಥ ಗಳಿಸಿದೆ.
ಮಹಿಳಾ ವಿಭಾಗದಲ್ಲಿ ಟಿ.ನರಸೀಪುರದ ನವೋದಯ ತಂಡ ಪ್ರಥಮ ಸ್ಥಾನ ಗಳಿಸಿದರೆ, ಫೈನಲ್‌ನಲ್ಲಿ ಸೋತ ಅತಿಥೇಯ ಎಸ್‌ಸಿವೈಸಿ ತಂಡ ದ್ವಿತೀಯ ಸ್ಥಾನ ಗಳಿಸಿದೆ. ತೃತೀಯ ಸ್ಥಾನದಲ್ಲಿ ರಾಯಚೂರು ಕೆಎಂಎಸ್ ತಂಡ, ಚತುರ್ಥ ಸ್ಥಾನದಲ್ಲಿ ಶಿವಮೊಗ್ಗದ ಸಿಕೆಕೆಸಿ ತಂಡ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ತುಮಕೂರಿನ ವಿವೇಕಾನಂದ ತಂಡ ಪ್ರಥಮ ಸ್ಥಾನ ಗಳಿಸಿದರೆ, ಬೆಂಗಳೂರಿನ ಪಯೋನಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆದಿದೆ. ದಾವಣಗೆರೆಯ ಡಿವೈಎಸ್‌ಎಸ್ ತಂಡ ತೃತೀಯ ಹಾಗೂ ಅತಿಥೇಯ ಎಸ್‌ಸಿವೈಸಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿದೆ.
ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ವೈಯಕ್ತಿಕ ಬಹುಮಾನ ಮೂಡಬಿದರೆ ಆಳ್ವಾಸ್ ತಂಡದ ಗಿರೀಶ್ ಪಡೆದುಕೊಂಡರು. ಉತ್ತಮ ಓಟಗಾರನಾಗಿ ಅತಿಥೇಯ ಎಸ್‌ಸಿವೈಸಿ ತಂಡದ ವಿನಾಯಕ, ಉತ್ತಮ ಹಿಡಿತಗಾರನಾಗಿ ಬೆಂಗಳೂರಿನ ಪಯೋನಿಯರ್ಸ್ ತಂಡದ ಬಸವರಾಜು ಗಳಿಸಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಶ್ರೇಷ್ಠ ಆಟಗಾರ್ತಿಯಾಗಿ ಟಿ.ನರಸೀಪುರದ ನವೋದಯ ತಂಡದ ಮೇಘನಾ ಆಯ್ಕೆಯಾದರು. ಉತ್ತಮ ಓಟಗಾರ್ತಿಯಾಗಿ ರಾಯಚೂರು ಕೆಎಂಎಸ್ ತಂಡದ ನಿರ್ಮಲ, ಉತ್ತಮ ಹಿಡಿತಗಾರ್ತಿಯಾಗಿ ಅತಿಥೇಯ ಎಸ್‌ಸಿವೈಸಿ ತಂಡದ ರೂಪ ಪಡೆದುಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement