ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಈಡೇರಿದ ಪೋಲಿಯೊ ಮುಕ್ತ ಭಾರತದ ಕನಸು

Vishwanath S
Updated On : 20 Jan 2014, 12:30 pm

ಚಿಕ್ಕನಾಯಕನಹಳ್ಳಿ: ರಾಷ್ಟ್ರದ ಜನರಲ್ಲಿ ಜಾಗೃತಿ ಮೂಡಿಸಿ ಪೋಲಿಯೊ ಮುಕ್ತ  ರಾಷ್ಟ್ರವನ್ನಾಗಿ ಮಾಡಿದ ದೇಶದ ಪ್ರಜೆಗಳು ಅಭಿನಂದನಾರ್ಹರು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ನುಡಿದರು.
ಅವರು ಭಾನುವಾರ  ಪಟ್ಟಣದ ಬಸ್ ನಿಲ್ದಾಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ರೋಟರಿ ಕ್ಲಬ್ ಮತ್ತು ಸ್ಥಳೀಯ ಪುರಸಭೆ ಹಮ್ಮಿಕೊಂಡಿದ್ದ ಪೋಲಿಯೊ ಲಸಿಕೆ ಕಾರ್ಯಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ವ ಆರೋಗ್ಯ ಸಂಘಟನೆ ಪೋಲಿಯೊ ಮುಕ್ತ ವಿಶ್ವವನ್ನಾಗಿ ಮಾಡುವ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತ ಭಾರತ ಕಡಿಮೆ ಅವಧಿಯಲ್ಲಿ ಮಹಾಮಾರಿಯಾದ ಮಾನವನ ಜೀವನವನ್ನೇ ಬಲಿಪಡೆಯುತ್ತಿದ್ದಂತ ಪೋಲಿಯೊ ರೋಗವನ್ನು ಹೊಡೆದೋಡಿಸುವಲ್ಲಿ ಜಯಸಾಧಿಸಿದೆ. ಇದು ನಮ್ಮ ಸ್ವಯಂ ಸೇವಾ ಸಂಘಟನೆಗಳು ಮತ್ತು ಪ್ರಜೆಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಅವಿರತ ಶ್ರಮದಿಂದಾಗಿ ಸಾಧ್ಯವಾಗಿದೆ. ಇದಕ್ಕಾಗಿ ಎಲ್ಲರು ಅಭಿನಂದನಾರ್ಹರು ಎಂದರು. ತಾಲೂಕು ಆರೋಗ್ಯಾಧಿಕಾರಿ ಶಿವಕಮಾರ್ ಮಾತನಾಡಿ 20 ವರ್ಷಗಳ ಸತತ ಹೋರಾಟದ ಫಲವಾಗಿ ಕಳೆದ 3 ವರ್ಷಗಳಿಂದ ದೇಶದಲ್ಲಿ ಒಂದೇ ಒಂದು ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ. ಇದು ರಾಷ್ಟ್ರಜಾಗೃತಿ ಅಭಿಯಾನ ಕೈಗೊಂಡ ಪರಿಣಾಮ. ಇದರಲ್ಲಿ ಯಶಸ್ಸನ್ನು ಪಡೆದಿದ್ದೇವೆ. ಆದ್ದರಿಂದ ವಿಶ್ವ ಆರೋಗ್ಯ ಸಂಘಟನೆಯಿಂದ ನಮ್ಮ ದೇಶ ಪೋಲಿಯೊ ಮುಕ್ತ ಭಾರತ ಎಂದು ಪ್ರಮಾಣ ಪತ್ರ ಪಡೆಯುವ ಅರ್ಹತೆ ಪಡೆದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement