ಪೋಲಿಯೊ ನಿರ್ಮೂಲನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
ಕುಣಿಗಲ್: ಭಾರತದಲ್ಲಿ 2010ರ ನಂತರ ಪೊಲಿಯೊ ಪ್ರಕರಣ ಪತ್ತೆಯಾಗಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪೋಲಿಯೊನಂತಹ ಮಾರಕ ರೋಗವನ್ನು ದೇಶದಿಂದಲೇ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವೈದ್ಯಕಿಯ ಇಲಾಖಾ ಸಿಬ್ಬಂದಿ ಜೊತೆಯಲ್ಲಿ ಸಾರ್ವಜನಿಕರು ಪರಿಣಾಮಕಾರಿ ಪಾತ್ರವಹಿಸಬೇಕಿದೆ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಭಾನುವಾರ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಳೆ ವಯಸ್ಸಿನ ಮಕ್ಕಳಲ್ಲಿ ಶಾಶ್ವತ ದೈಹಿಕ ಹಾಗೂ ಬುದ್ಧಿಯ ಅಂಗವಿಕಲತೆ ಉಂಟು ಮಾಡುವಂತ ಮಹಾಮಾರಿ ಕಾಯಿಲೆಯಾದ ಪೋಲಿಯೊ ರೋಗಕ್ಕೆ, ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ಕೇವಲ ಎರಡು ಹನಿ ಔಷಧ ನೀಡುವ ಮೂಲಕ ಮಕ್ಕಳನ್ನು ಮಾರಾಣಾಂತಿಕ ರೋಗದಿಂದ ಪಾರುಮಾಡಬಹುದಾಗಿದೆ.
ಈಗಾಗಲೆ ಭಾರತವು ಪೋಲಿಯೊ ಮುಕ್ತ ರಾಷ್ಟ್ರದ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದ್ದು, ಇದರ ಯಶಸ್ಸಿಗೆ ವೈದ್ಯಕೀಯ ಸಿಬ್ಬಂದಿ ಜೊತೆಯಲ್ಲಿ ಸಾರ್ವಜನಿಕ ಸಿಬ್ಬಂದಿಯ ಪಾತ್ರವು ಅಷ್ಟೆ ಮಹತ್ವದಾಗಿದೆ.
ಯಾವುದೇ ಮೂಢನಂಬಿಕೆ, ವದಂತಿಗೆ ಕಿವಿಗೊಡದೆ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವುದರ ಮೂಲಕ ಪೋಲಿಯೊ ಮುಕ್ತ ರಾಷ್ಟ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.
ತಹಸೀಲ್ದಾರ್ ಪುಟ್ಟನರಸಯ್ಯ, ಪೋಲಿಯೊ ತಾಲೂಕು ನೋಡಲ್ ಅಧಿಕಾರಿ ಪ್ರಶಾಂತ್, ತಾಲೂಕು ಆರೋಗ್ಯಾಧಿಕಾರಿ ಶಾಂತಲಾ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಗಣೇಶ ಬಾಬು, ಭಾರತೀಯ ವೈದ್ಯಕೀಯ ಸಂಘದ ತಾಲೂಕು ಶಾಖೆ ಅಧ್ಯಕ್ಷ ರವಿಕುಮಾರ್, ಇತರರು ಉಪಸ್ತಿತರಿದ್ದರು.