ಜಿಲ್ಲಾಮಟ್ಟದ ಕನ್ನಡ ಭಾಷಣ ಸ್ಪರ್ಧೆ ವಿಜೇತರು
ತುಮಕೂರು: ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವೇಕಾನಂದ ಯುವಕ ಸಂಘ ಹಾಗೂ ನಿವೇದಿತಾ ನಿಕೇತನದ ವತಿಯಿಂದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ಜಿಲ್ಲಾಮಟ್ಟದ ಕನ್ನಡ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರ ವಿವರಗಳು ಇಂತಿವೆ.
ಸಾರ್ವಜನಿಕರಿಗಾಗಿ ಕನ್ನಡ ಭಾಷಣ ಸ್ಪರ್ಧೆ: ಪ್ರಥಮ ಬಹುಮಾನ: ಸುಷ್ಮಾ ಸುರೇಶ್, ಗೃಹಿಣಿ, ಕುಣಿಗಲ್, ದ್ವಿತೀಯ ಬಹುಮಾನ ಬಾಲಚಂದ್ರ, ಬಿ.ಇಡಿ, ಕ್ಯಾತ್ಸಂದ್ರ, ತೃತೀಯ ಬಹುಮಾನ ರಮ್ಯಶ್ರೀ, ತುಮಕೂರು.