ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ: ಕೆ.ಷಡಕ್ಷರಿ
ಕ.ಪ್ರ.ವಾರ್ತೆ ತಿಪಟೂರು ಜ.20
ಸರ್ಕಾರವು ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಠಾಗೂರ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರವು ಈ ಯೋಜನೆಯ ಜೊತೆಗೆ ಕ್ಷೀರಭಾಗ್ಯ, ಅಕ್ಷರ ದಾಸೋಹ, ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಿಗೆ ಅನೂಕಲವಾಗುವ ದೃಷ್ಟಿಯಿಂದ. ಈ ನಿಟ್ಟಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಬೇಕು. ಈ ಶಾಲೆಯ ಅಧ್ಯಕ್ಷರಾದ ಬಿ.ಡಿ. ರಾಮಯ್ಯನವರು ಶಿಸ್ತಿನ ಸಿಪಾಯಿಗಳಂತೆ ಕಾರ್ಯನಿರ್ವಹಿಸುವ ಜೊತೆಗೆ ಶಾಲೆಯು ಶಿಸ್ತಿನಿಂದ ಬೆಲೆಯುತ್ತಿರುವುದ ಸಂತೋಷದ ಸಂಗತಿ ಎಂದರು.
ಬಿಇಓ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ನಗರಸಭಾ ಸದಸ್ಯ ಲಿಂಗರಾಜು, ನಿವೃತ್ತ ಪ್ರಾಂಶುಪಾಲ ಷಣ್ಮುಖಪ್ಪ, ಮುಖ್ಯ ಶಿಕ್ಷಕಿಯರಾದ ಬಿ.ಸಿ.ಗೀತಾ, ಶಶಿಕಲಾ ಮತ್ತಿತರರಿದ್ದರು. ಶಿಕ್ಷಕಿ ಶಿವಗಂಗಾ ಸ್ವಾಗತಿಸಿ, ತಿಪ್ಪೂರಯ್ಯ ನಿರೂಪಿಸಿ, ಶಿಕ್ಷಕ ವಿನಯ್ ವಂದಿಸಿದರು.