ಸುಮೋ ಡಿಕ್ಕಿ: ಯುವಕ ಸಾವು
ಕುಣಿಗಲ್: ಬೈಕ್ ಸವಾರನಿಗೆ ಸುಮೋ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತನನ್ನು ಬೆಂಗಳೂರಿನ ಅಜಯ್ (18) ಎಂದು ಗುರುತಿಸಲಾಗಿದೆ. ಈತ ದೇವಲಾಪುರ ಗ್ರಾಮದ ಸಂಬಂಧಿಕರ ಮನೆಯಿಂದ ಬೆಂಗಳೂರಿಗೆ ಬೈಕ್ನಲ್ಲಿ ಹಿಂದಿರುಗುವಾಗ, ಬೆಳಗಿನ ಜಾವ, ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಸ್ತರಪಾಳ್ಯ ಗ್ರಾಮದ ಬಳಿ ಸುಮೋ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಾನಸಿಕ ಅಸ್ವಸ್ಥೆ ಅನುಮಾನಾಸ್ಪದ ಸಾವು
ಗುಬ್ಬಿ: ಹುಟ್ಟಿನಿಂದ ಮಾನಸಿಕ ಅಸ್ವಸ್ಥೆಯಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಆಕೆಯ ಶವ ಕರೇಕುರಿ ಹಟ್ಟಿಗೆ ಹೋಗುವ ರಸ್ತೆ ಬದಿಯ ಪಕ್ಕದ ಪೊದೆಯಲ್ಲಿ ಪತ್ತೆಯಾಗಿದೆ. ಗುಬ್ಬಿ ತಾಲೂಕಿನ ಮತ್ತಿಘಟ್ಟ ಗ್ರಾಮದ ನೀಲಮ್ಮ(31) ಸಾವನ್ನಪ್ಪಿದವಳೆಂದು ತಿಳಿದು ಬಂದಿದ್ದು ಗುಬ್ಬಿ ಪೊಲೀಸ್ ಠಾಣಾ ಪಿಎಸ್ಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.