ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚಿರತೆ ದಾಳಿಗೆ 6 ಮೇಕೆ ಸಾವು

Rashmi Kasaragodu
Updated On : 22 Jan 2014, 1:36 am

ಕುಣಿಗಲ್: ಚಿರತೆ ದಾಳಿಗೆ ಆರು ಮೇಕೆಗಳು ಮೃತಪಟ್ಟಿರುವ ಘಟನೆ, ತಾಲೂಕಿನ ಕಸಬಾ ಹೋಬಳಿಯ ತರೀಕೆರೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ತರೀಕೆರೆ ಗ್ರಾಮದ ಗಡಿ ಅಂಚಿನಲ್ಲಿರುವ ಸಾಕಮ್ಮ ಎಂಬುವವರಿಗೆ ಸೇರಿದ ಮೇಕೆ ಮಂದೆಯ ಮೇಲೆ, ಚಿರತೆ ದಾಳಿ ನಡೆಸಿ, ಆರು ಮೇಕೆಗಳನ್ನು ಕೊಂದಿದೆ.
ಹುಲಿಯೂರುದುರ್ಗ ಹೋಬಳಿಯಲ್ಲಿ ಹಾವಳಿ ನಡೆಸಿದ್ದ ಚಿರತೆಯನ್ನು, ಈಚೆಗೆ ಗ್ರಾಮಸ್ಥರ  ಸಹಕಾರದಿಂದ ಅರಣ್ಯ ಇಲಾಖೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಕೊತ್ತಗೆರೆ, ಕಸಬಾ ಹಾಗೂ ಹುತ್ರಿದುರ್ಗ ಹೋಬಳಿಗಳ ಆಯ್ದ ಪ್ರದೇಶದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಚಿರತೆ ಹಿಡಿದು, ಸಾಕುಪ್ರಾಣಿಗಳ ರಕ್ಷಣೆ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement