ತುರುವೇಕೆರೆ ತಾಪಂ ಅಧ್ಯಕ್ಷರಾಗಿ ಕೋಳಾಲ ಗಂಗಾಧರ್ ಆಯ್ಕೆ
ತುರುವೇಕೆರೆ: ನಿರೀಕ್ಷೆಯಂತೆ ತಾಲೂಕು ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಕೊಡಗೀಹಳ್ಳಿ ಕ್ಷೇತ್ರದ ಸದಸ್ಯ ಕೋಳಾಲ ಗಂಗಾಧರ್ ಅವಿರೋಧವಾಗಿ ಆಯ್ಕೆಯಾದರು.
ಶಾಸಕ ಎಂ.ಟಿ.ಕೃಷ್ಣಪ್ಪ ನವರ ಸಮ್ಮುಖ ನಡೆದ ಮಾತುಕತೆಯಲ್ಲಿ ಕೋಳಾಲ ಗಂಗಾಧರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ನಿರ್ಧಾರದಂತೆ ಕೋಳಾಲ ಗಂಗಾಧರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ತಿಪಟೂರು ಉಪ ವಿಭಾಗಾಧಿಕಾರಿ ಸಿಂಧೂ ಅವರು ಕೋಳಾಲ ಗಂಗಾಧರ್ ಅವರ ಆಯ್ಕೆಯನ್ನು ಪ್ರಕಟಿಸಿದರು.
ಈ ಹಿಂದೆ ಗಂಗಾಧರ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸದಸ್ಯರಾದ ಎಂ.ಡಿ.ರಮೇಶ್ ಗೌಡ, ಎಂ.ಜಿ.ಲಕ್ಷ್ಮೀಕಾಂತ್, ವೆಂಕಟರಾಮಯ್ಯ, ರಾಮಚಂದ್ರು, ಮಲ್ಲೇಶ್, ಕಾವ್ಯ, ಉಪಾಧ್ಯಕ್ಷೆ ಶಬಿನಾಬಿ ಮುಕ್ತಿಯಾರ್, ಭಾಗ್ಯಮ್ಮ, ನಾಗಮಣಿ, ಪದ್ಮಾವತಿ, ಪಾರ್ವತಮ್ಮ ಮೊಲಾದ ಸದಸ್ಯರು ಅಭಿನಂದಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪನವರೂ ಸಹ ನೂತನ ಅಧ್ಯಕ್ಷ ಕೋಳಾಲ ಗಂಗಾಧರ್ಗೆ ಅಭಿನಂದಿಸಿದರು. ಎ.ಪಿ.ಎಂ.ಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಸದಸ್ಯರಾದ ಮಂಗೀಕುಪ್ಪೆ ಬಸವರಾಜು, ಡಿ.ಜಿ.ರಂಗಸ್ವಾಮಿ ಮೊದಲಾದವರು ಅಭಿನಂದಿಸಿದರು.