ಪಾವಗಡ: ಭೋವಿ ಜನಾಂಗದ ಸಭೆ
ಪಾವಗಡ: ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಭೋವಿ ಸಮ್ಮೇಳನ ನಡೆಯುವ ಹಿನ್ನೆಲೆಯಲ್ಲಿ ತಾ.ಇಮ್ಮಡಿ ಸಿದ್ಧರಾಮೇಶ್ವರ ಭೋವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜ.26ರಂದು ಭಾನುವಾರ ಬೆಳಿಗ್ಗೆ 12ಗಂಟೆಗೆ ಪಟ್ಟಣದ ಭೋವಿ ವಿದ್ಯಾರ್ಥಿ ನಿಲಯದಲ್ಲಿ ಜನಾಂಗದ ಸಭೆ ಏರ್ಪಾಡಿಸಲಾಗಿದೆ. ಫೆ.8ರಂದು ಚಿತ್ರದುರ್ಗ ನಗರದಲ್ಲಿ ರಾಜ್ಯ ಮಟ್ಟದ ಭೋವಿ ಜನಾಂಗದ ಸಮಾವೇಶ ನಡೆಯಲಿದೆ. ಸಭೆಯಲ್ಲಿ ಭೋವಿ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆ ನಡೆಸಲಾಗಿದ್ದು ಅಲ್ಲದೆ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸೇರಿದಂತೆ ಸಮಾವೇಶದ ರೂಪುರೇಷಗಳು ಮತ್ತು ಹಿರಿಯರ ಸಲಹೆ ಸೂಚನೆಗಳನ್ನು ಪಡೆಯಲಾಗವುದು. ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭೋವಿ ಜನಾಂಗದ ಪದಾಧಿಕಾರಿಗಳು ಭಾಗವಹಿಸಿ ಸಭೆ ಯಶಸ್ವಿಗೊಳಿಸುವಂತೆ ಮುಖಂಡ ನಾರಾಯಣ ತಿಳಿಸಿದ್ದಾರೆ.