ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಮಶಾನ ಜಾಗ ಒತ್ತುವರಿ ಆರೋಪ: ತಹಸೀಲ್ದಾರ್ ಭೇಟಿ, ಪರಿಶೀಲನೆ

Rashmi Kasaragodu
Updated On : 22 Jan 2014, 1:33 am

ಪಾವಗಡ: ಅಕ್ರಮ ಒತ್ತುವರಿಯ ಹಿನ್ನೆಲೆ ಹಾಗೂ ದಲಿತರ ದೂರಿನ ಮೇರೆಗೆ ಮಂಗಳವಾರ ತಹಸೀಲ್ಧಾರ್ ಮಹಮ್ಮದ್ ಆಲ್ತಾಪ್ ಪಾಷ ಕತಿಕ್ಯಾತನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಮಶಾನ ಜಾಗವನ್ನು ಪರಿಶೀಲಿಸಿದರು.
ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯ ಕತಿಕ್ಯಾತನಹಳ್ಳಿ ಗ್ರಾಮದ ಸರ್ವೆ ನಂ. 65-1ರಲ್ಲಿ 11ಎಕರೆ ಜಮೀನು ಇದ್ದು ಇದರಲ್ಲಿ 2 ಎಕರೆ ಸರ್ಕಾರಿ ಖರಾಬು ಜಮೀನು ಇದೆ. ಸರ್ಕಾರದ 2 ಎಕರೆ ಖರಾಬಿನಲ್ಲಿ ನೂರಾರು ವರ್ಷಗಳಿಂದ ಗ್ರಾಮದ ದಲಿತರು ಶವ ಸಂಸ್ಕಾರ ಮಾಡುತ್ತಿದ್ದರು. ದಲಿತರ ಸ್ಮಶಾನಕ್ಕೆ ಮೀಸಲಿದ್ದು ಈ ಎರಡು ಎಕರೆ ಖರಾಜು ಜಮೀನನ್ನು ಗ್ರಾಮದ ಮೇಲ್ಜಾತಿಗೆ ಸೇರಿದವರೊಬ್ಬರು  ಒತ್ತುವರಿ ಮಾಡಿ ಶವ ಹೂಳದಂತೆ ಸ್ಮಶಾನದ ಸುತ್ತ ತಂತಿ ಬೇಲಿ ಹಾಕಿಸಿರುವ ಕಾರಣ ದಲಿತರು ಶವ ಸಂಸ್ಕಾರ ಮಾಡಲು ಜಾಗವಿಲ್ಲದಂತಾಗಿದೆ.
 ದಲಿತ ಮುಖಂಡ ನರಸಪ್ಪ ಎಂಬುವರು ಈ ಕುರಿತಂತೆ  ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ಥಳ ತನಿಖೆ ಮಾಡಿ ಕ್ರಮ ಜರುಗಿಸುವಲ್ಲಿ ಠಾಣಾ ಪಿಎಸ್ಐ ಮೀನಮೇಷ ಎಣಿಸಿದ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಮತ್ತು ದಲಿತರ ಸೂಕ್ತ ರಕ್ಷಣೆಗೆ ಮುಖಂಡ ನರಸಪ್ಪ ತಹಸೀಲ್ದಾರ್ ಪಾಷ ಅವರಿಗೆ ದೂರು ನೀಡಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ತಹಸೀಲ್ದಾರ್ ಪಾಷ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ತಲತಲಾಂತರಗಳಿಂದ ದಲಿತರ ಸ್ಮಶಾನಕ್ಕೆ ಮೀಸಲಿದ್ದ ಸರ್ಕಾರಿ ಖರಾಜು 2 ಏಕರೆ ಒತ್ತುವರಿ ಕೂಡಲೇ ತೆರವು ಗೊಳಿಸಿ ದಲಿತರಿಗೆ ಅನುಕೂಲ ಕಲ್ಪಿಸಿ ಎಂದು ಅಕ್ರಮ ಒತ್ತುವರಿ ಮಾಲೀಕ ಹಾಗೂ ಅಧಿಕಾರಿಗಳಿಗೆ ಆದೇಶಿಸಿದರು.
ಪಿಎಸ್ಐ ಕಿರಣ್ ಕುಮಾರ್, ಶಿರಸ್ತೇದಾರ್ ಶಿವನಂದಾರೆಡ್ಡಿ, ಗ್ರಾಮ ಲೆಕ್ಕಿಗ ಹಾಗೂ ಮುಖಂಡರಾದ ಕೋರ್ಟ್ ನರಸಪ್ಪ ತಾ. ದಂಡೋರ ಅಧ್ಯಕ್ಷ ವಳ್ಳೂರು ನಾಗೇಶ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement