ಇಂದು ವಿಚಾರ ಸಂಕಿರಣ
ತಿಪಟೂರು: ಪಟ್ಟಣದ ಗುರುಕುಲಾನಂದಾಶ್ರಮ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಗಾಂಧೀಜಿ ವಿಚಾರಧಾರೆಗಳ ಪ್ರಸ್ತುತತೆ ವಿಚಾರ ಸಂಕಿರಣ ಹಾಗೂ ನೇತ್ರದಾನ ಪ್ರೇರಣೆ ಮತ್ತು ಶಿಬಿರವನ್ನು ಗುರುವಾರ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಜಿ.ಎಸ್.ರಘು ಹಾಗೂ ಕಲ್ಪತರು ಜನಪರ ಹೋರಾಟ ವೇದಿಕೆ ಗೌರವಾಧ್ಯಕ್ಷ ಮತ್ತು ವಿಶ್ರಾಂತ ಪ್ರಾಂಶುಪಾಲ ಉಪೇಂದ್ರ ಮನವಿ ಮಾಡಿದ್ದಾರೆ