ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಡಾನೆ ಕಾಟ; ಹೊಲಗಳಿಗೆ ಸಂಜೆ ವೇಳೆ ಹೋಗಬೇಡಿ

Rashmi Kasaragodu
Updated On : 23 Jan 2014, 1:53 am

ಕನ್ನಡಪ್ರಭ ವಾರ್ತೆ    ತುಮಕೂರು    ಜ. 22
ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಡಾನೆಗಳು ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಜೆ 6 ಗಂಟೆಯ ನಂತರ ಹೊಲಗದ್ದೆಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿ, ಮನೆಗೆ ತೆರಳುವಂತೆ ತುಮಕೂರು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಗ್ರಾಮಾಂತರ ಪ್ರದೇಶಗಳಾದ ಒಳಕಲ್ಲು, ನಾಗವಲ್ಲಿ, ಗಂಗಸಂದ್ರ, ಲಕ್ಷ್ಮಣಸಂದ್ರ, ಮಲ್ಲಸಂದ್ರ, ಪೆರಮನಹಳ್ಳಿ ಕೆರೆ, ಮೂಕನಹಳ್ಳಿ ಪಟ್ಟಣ ಕೆರೆಗಳಲ್ಲಿ ಹೇಮಾವತಿ ನಾಲೆಯಿಂದ ಹರಿಸಲಾದ ನೀರು ತುಂಬಿದ್ದು, ಕಾಡಾನೆಗಳು ತಂಡೋಪತಂಡವಾಗಿ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಪ್ರವೇಶ ಮಾಡಿರುತ್ತವೆ. ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ. ಬೆಳಗಿನ ವೇಳೆ ದಿನನಿತ್ಯದ ಕೃಷಿ ಕೆಲಸಗಳಿಗೆ ತೆರಳುವಾಗ ಮತ್ತು ದೈನಂದಿನ ಚಟುವಟಿಕೆಗಳಿಗೆ ಹೊರಗೆ ಹೋಗುವಾಗ ಎಚ್ಚರಿಕೆಯಿಂದಿರಬೇಕು. ಈಗಾಗಲೇ ಸಂಭವಿಸಿರುವ ರೈತರ ಬೆಳೆ ಹಾನಿಗೆ ಪರಿಹಾರ ನೀಡಲು ಅರಣ್ಯ ಇಲಾಖೆಯು ಬದ್ಧವಾಗಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ (0816-2201196), ವಲಯ ಅರಣ್ಯಾಧಿಕಾರಿಗಳ ಕಚೇರಿ (0816-2255148), ನರಸಿಂಹಮೂರ್ತಿ (94487 61599), ಜಿ.ಆರ್. ಜಯರಾಂ (9449393556), ಎಚ್.ಎನ್.ಬೋರೇಗೌಡ (9448559138), ಜಿ.ಎಚ್.ಪ್ರಕಾಶ್ (9844540994), ಉಪ ವಲಯ ಅರಣ್ಯಾಧಿಕಾರಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement