ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾರ್ಯದರ್ಶಿ ಮೇಲೆ ಹಲ್ಲೆ; ಪ್ರತಿಭಟನೆ

Rashmi Kasaragodu
Updated On : 23 Jan 2014, 1:52 am

ಪಾವಗಡ: ಕಾರ್ಯದರ್ಶಿಯ ಮೇಲೆ ನಡೆದ ಹಲ್ಲೆ ಖಂಡಿಸಿ ತಾ. ಸರ್ಕಾರಿ ನೌಕರರ ಸಂಘದ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಡಿತರ ಚೀಟಿಗಳು ನೀಡುವಲ್ಲಿ ತಮಗೆ ವಂಚಿಸಿದ್ದಾರೆಂದು ಮನೆಗೆ ನುಗ್ಗಿದ ಗುಮ್ಮಘಟ್ಟ ಗ್ರಾಮದ ಕೆಲ ಭೂ ಮಾಲೀಕರು ಮಂಗಳವಾರ ವಿರಪಸಮುದ್ರ ಗ್ರಾಪಂ ಗ್ರೇಡ್ 2 ಕಾರ್ಯದರ್ಶಿ ಇ.ಶಿವರಾಮ್ ಎಂಬವರ ಮೇಲೆ ಹಲ್ಲೆ ನಡೆಸಿ ಅವರ ಬಲಗೈನ ಮೂಳೆ ಮುರಿದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ಭಾಗ್ಯಲಕ್ಷ್ಮೀ ತಾಪಂ ಇಒ ತಿಪ್ಪೇಸ್ವಾಮಿ ಮತ್ತು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ತಾ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಆರ್.ಚೌಧರಿ, ಭೂ ಮಾಲೀಕರಿಗೆ ಕಾನೂನಿನ್ವಯ ಬಿಪಿಎಲ್ ಪಡಿತರ ಕಾರ್ಡ್ ಕೊಡಲು ಅವಕಾಶವಿಲ್ಲದ ಕಾರಣ ಕಾರ್ಡ್ ಕೊಡಲು ಕಾರ್ಯದರ್ಶಿ ನಿರಾಕರಿಸಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಗ್ರಾಮದ ಜೆಸಿಬಿ ಹಾಗೂ ಟ್ರಾಕ್ಟರ್ಗಳುಳ್ಳ ಭೂ ಮಾಲೀಕರಾದ ಮಲ್ಲಯ್ಯ ಹಾಗೂ ಕಂಬದೂರಪ್ಪ  ಹಲ್ಲೆ ಮಾಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಸಮಸ್ಯೆ ಇದ್ದರೆ ಕಾನೂನು ರೀತ್ಯ ಬಗ್ಗೆ ಹರಿಸಿಕೊಳ್ಳಬೇಕು. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಪಾಷ ಅವರಿಗೆ ಮನವಿ ನೀಡಿದರು. ತಾಪಂ ಇಒ ತಿಪ್ಪೇಸ್ವಾಮಿ, ಬಿಇಒ ನಾಗರಾಜ್, ಗ್ರಾಪಂ ಪಿಡಿಒಗಳಾದ ಜಯರಾಮ್, ಕಿಶೋರ್ಲಾಲ್, ಅಂಚಿನಳ್ಕರ್, ನಾಗರಾಜ್, ದಾದಲೂರಿ  ಮಾತನಾಡಿ ಘಟನೆಯನ್ನು ಖಂಡಿಸಿದರು.
ತಾ.ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ನರಸಿಂಹ, ನಿಲಯ ಪಾಲಕರಾದ ಶಿವಪ್ಪ, ರಾಜ್ಕುಮಾರ್, ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪಯ್ಯ, ಶಿಕ್ಷಕ ಹನುಮಂತರಾಯ, ಕಾರ್ಯದರ್ಶಿಗಳಾದ ಪ್ರಕಾಶ್, ರಾಮಪ್ಪ, ರಾಮಾಂಜಿನಪ್ಪ, ಪೊಲೀಸ್ ಜಾವೀದ್, ಎಸ್ಬಿ ಕಾನ್ಸ್ಟೇಬಲ್ ನಾಗರಾಜ್ ಹಾಗೂ ತಾ.ಶಿಕ್ಷಕರ ಸಂಘ, ಕಂದಾಯ ಇಲಾಖೆ, ತಾ.ಸಮಾಜ ಕಲ್ಯಾಣ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ನೂರಾರು ಅಧಿಕಾರಿಗಳು  ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement