ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾನಮ್ಮ ಜಿಪಂ ಉಪಾಧ್ಯಕ್ಷೆ

Rashmi Kasaragodu
Updated On : 23 Jan 2014, 1:52 am

ಕ.ಪ್ರ. ವಾರ್ತೆ    ತುಮಕೂರು    ಜ. 22
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಪಂ ಉಪಾಧ್ಯಕ್ಷರ ಚುನಾವಣೆಯಲ್ಲಿ ಹಂದನಕೆರೆ ಕ್ಷೇತ್ರದ ಜಿಪಂ ಸದಸ್ಯೆ ಜಾನಮ್ಮ ರಾಮಚಂದ್ರಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾರಿಗೆ ಇಲಾಖೆಯ ಆಯುಕ್ತ ಗೌರವಗುಪ್ತ ಅವರು ಚುನಾವಣಾಧಿಕಾರಿಯಾಗಿದ್ದ ಚುನಾವಣೆಗೆ ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಸಲ್ಲಿಸುವ ಕಾರ್ಯ ಮುಕ್ತಾಯವಾಗಿದ್ದು, ತುರುವೇಕೆರೆ ತಾಲೂಕು ಮುನಿಯೂರು ಕ್ಷೇತ್ರದ ಲತಾ ವಿಶ್ವನಾಥ್, ಮಧುಗಿರಿ ತಾಲೂಕು ದೊಡ್ಡೇರಿ ಕ್ಷೇತ್ರದ ಯಶೋಧ ಶ್ರೀನಿವಾಸ್ ಮತ್ತು ಚಿ.ನಾ.ಹಳ್ಳಿ ತಾಲೂಕು ಹಂದನಕೆರೆ ಕ್ಷೇತ್ರದ ಜಾನಮ್ಮ ರಾಮಚಂದ್ರಯ್ಯ ನಾಮಪತ್ರ ಸಲ್ಲಿಸಿದ್ದರು.
ಸಂಜೆ ನಾಲ್ಕು ಗಂಟೆಗೆ ಚುನಾವಣೆ ಆರಂಭವಾಗುವ ಮುನ್ನ ಜಿಪಂ ಆವರಣದಲ್ಲಿ ನಾಮಪತ್ರ ಹಿಂಗೆತೆಯುವ ಸಂಬಂಧ ದೊಡ್ಡೇರಿ ಕ್ಷೇತ್ರದ ಯಶೋಧ ಶ್ರೀನಿವಾಸ್ ಅವರ ಮನವೊಲಿಸುವ ಸಂಬಂಧ ಕಾರ್ಯಕರ್ತರ ನಡುವೆ ಮಾತಿನ ಚಕಮುಖಿ ನಡೆದು ಗೊಂದಲ ಸೃಷ್ಟಿಯಾಯ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಅಧ್ಯಕ್ಷ ರವಿ ನಾಗರಾಜಯ್ಯ, ಸದಸ್ಯರಾದ ಸಿ.ಆರ್.ಉಮೇಶ್, ವೈ.ಎಚ್.ಹುಚ್ಚಯ್ಯ ಅವರು ಯಶೋಧ ಶ್ರೀನಿವಾಸ್ ಅವರ ಮನವೊಲಿಸಿ ನಾಮಪತ್ರ ವಾಪಸ್ಸು ಪಡೆಯಲು ಒಪ್ಪಿಸಿದರು.
ನಂತರ ನಡೆದ ಚುನಾವಣೆಯಲ್ಲಿ ಲತಾ ವಿಶ್ವನಾಥ್ ಮತ್ತು ಯಶೋಧ ಶ್ರೀನಿವಾಸ್ ನಾಮಪತ್ರ ವಾಪಸ್ಸು ಪಡೆದರು. ಅಂತಿಮವಾಗಿ ಜಾನಮ್ಮ ರಾಮಚಂದ್ರಯ್ಯ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement