ಪಿಎಂಇನಲ್ಲಿ ನವೀನ್ ಪ್ರಥಮ ರ್ಯಾಂಕ್
ತಿಪಟೂರು: ತುಮಕೂರು ವಿವಿ ಮೇ ಮತ್ತು ಜೂನ್ 2013ರಲ್ಲಿ ನಡೆಸಿದ ಅಂತಿಮ ಬಿಎಸ್ಸಿ ಪರೀಕ್ಷೆಯಲ್ಲಿ ತಿಪಟೂರಿನ ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು 10 ರ್ಯಾಂಕ್ಗಳಲ್ಲಿ ಪ್ರಥಮ ರ್ಯಾಂಕ್ ಜೊತೆಯಲ್ಲಿ ಒಟ್ಟು 5 ರ್ಯಾಂಕ್ಗಳನ್ನು ಪಡೆದಿದೆ. ವಿದ್ಯಾರ್ಥಿ ಎಸ್.ಬಿ.ನವೀವ್ ಪಿಎಂಇನಲ್ಲಿ ಶೇ.95.75 ಗಳಿಸಿ ಪ್ರಥಮ ರ್ಯಾಂಕ್ ಪಡೆದಿದ್ದರೆ, ಬಿ.ಆರ್.ರಮಿತ ಪಿಸಿಎಂನಲ್ಲಿ ಶೇ.93.25 ಪಡೆದು 4ನೇ ರ್ಯಾಂಕ್ ಗಳಿಸಿದ್ದಾರೆ. ಎಸ್.ಬಿ.ರಾಜೀವ ಸಿಬಿಝಡ್ ಶೇ. 93.04 ಪಡೆದು 5ನೇ ರ್ಯಾಂಕ್, ಸಿ.ಎಚ್.ಕಾವ್ಯ ಪಿಎಂಸಿಎಸ್ನಲ್ಲಿ ಶೇ.92.17 ಗಳಿಸಿ 7ನೇ ರ್ಯಾಂಕ್ ಮತ್ತು ಎ.ಎನ್.ಚಂದನಕುಮಾರ್ ಪಿಎಂಇ ಶೇ.91.58 ಗಳಿಸಿ 10ನೇ ರ್ಯಾಂಕ್ ಪಡೆದಿದ್ದಾರೆ.