ರಾಹುಲ್ರನ್ನು ಪ್ರಧಾನಿ ಮಾಡಲಿ ನೋಡೋಣ
ತುಮಕೂರು: ತಾವು ಪ್ರಧಾನಿಯಾಗಲು ನಾನೇ ಕಾರಣ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲಿ ನೋಡೋಣ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಸವಾಲು ಎಸೆದಿದ್ದಾರೆ. ಅವರು ತುಮಕೂರಿನಲ್ಲಿ ಜೆಡಿಎಸ್ ವತಿಯಿಂದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ತಾವು ಪ್ರಧಾನಿಯಾಗಲು ಆಧಾರ ಸ್ತಂಭವಾಗಿದ್ದು ಮತದಾರರು ಎಂದು ಮಾರ್ಮಿಕವಾಗಿ ನುಡಿದರು.