ವಸೂಲಾತಿ ಆಂದೋಲನ ಕಾರ್ಯಕ್ರಮ
ತುಮಕೂರು: ತುಮಕೂರು ನಗರದ ಆಸ್ತಿ ತೆರಿಗೆ ಪಾವತಿದಾರರು 2013-14ನೇ ಸಾಲಿನವರೆಗೆ ಬಾಕಿ ಇರುವ ಆಸ್ತಿ ತೆರಿಗೆ, ನೀರು ಸರಬರಾಜು ತೆರಿಗೆ, ಉದ್ದಿಮೆ ಪರವಾನಗಿ ಶುಲ್ಕ ಮತ್ತು ಯು.ಜಿ.ಡಿ. ಸಂಪರ್ಕ ಶುಲ್ಕಗಳನ್ನು ವಸೂಲಿ ಮಾಡಲು ನಗರದ ವಿವಿಧ ವಾರ್ಡ್ಗಳಲ್ಲಿ ವಸೂಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಜನವರಿ 22ರಂದು ಬುಧವಾರ 24, 25, 26, 27ನೇ ವಾರ್ಡ್ನ ತೆರಿಗೆ ಪಾವತಿದಾರರಿಗಾಗಿ ಸುನೀತಾ ಹೋಟೆಲ್ ಎದುರು ರಾಮಮಂದಿರ ದೇವಸ್ಥಾನದಲ್ಲಿ, ಜನವರಿ 25 ರಂದು ಶನಿವಾರ 16, 17, 22ನೇ ವಾರ್ಡ್ನ ತೆರಿಗೆ ಪಾವತಿದಾರರಿಗಾಗಿ ಭಾರತ ಮಾತಾ ಸ್ಕೂಲ್ ನಲ್ಲಿ, ಜನವರಿ 28 ರಂದು ಮಂಗಳವಾರ 7, 9, 12, 13ನೇ ವಾರ್ಡ್ನ ತೆರಿಗೆ ಪಾವತಿದಾರರಿಗಾಗಿ ಬ್ರಾಹ್ಮಣ ಹಾಸ್ಟೆಲ್, ಬಿ.ಹೆಚ್.ರಸ್ತೆ ಹಾಗೂ ಜನವರಿ 31 ರಂದು ಶುಕ್ರವಾರ 4, 6, 7, 12ನೇ ವಾರ್ಡ್ನ ತೆರಿಗೆ ಪಾವತಿದಾರರಿಗಾಗಿ ಮಂಡಿಪೇಟೆ ಸರ್ಕಲ್- ಚರ್ಚ್ ಸರ್ಕಲ್ನಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರು ಈ ಪ್ರಯೋಜನ ಪಡೆದು ನಿಗದಿತ ದಿನಾಂಕಗಳಲ್ಲಿ ನಗರಪಾಲಿಕೆಗೆ ಬಾಕಿ ಇರುವ ತೆರಿಗೆಯನ್ನು ಸಂದಾಯ ಮಾಡಲು ಕೋರಲಾಗಿದೆ.