ವಿವಿಧ ವಿಷಯಗಳ ನಿರ್ವಹಣೆ ಕೋರ್ಸ್ತರಬೇತಿಗೆ ಸಲಹೆ
ಕುಣಿಗಲ್: ಎಲ್ಲಾರಂಗಗಳಲ್ಲೂ ಗಣಕೀಕರಣ ವ್ಯಾಪಕವಾಗುತ್ತಿರುವುದರಿಂದ ಮಹಿಳೆಯರು, ಅದರಲ್ಲೂ ಗ್ರಾಮಾಂತರ ಪ್ರದೇಶದ ಮಹಿಳೆಯರು ಗಣಕಯಂತ್ರ ನಿರ್ವಹಣೆ ಜೊತೆಯಲ್ಲಿ ವಿವಿಧ ವಿಷಯಗಳ ನಿರ್ವಹಣೆಯ ಕೋರ್ಸ್ಗಳ ತರಬೇತಿ ಪಡೆದು, ಜಾಗತಿಕರಣ ಒಡ್ಡಿರುವ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಬೇಕೆಂದು ಜಿಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಡಾ.ಬಿ.ಎನ್.ರವಿ ತಿಳಿಸಿದರು. ಸೋಮವಾರ, ಬೆಂಗಳೂರಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿ ಮತ್ತು ಪಟ್ಟಣದ ಚಿಗುರು ಫೌಂಡೇಷನ್ ವತಿಯಿಂದ ಗ್ರಾಮಾಂತರ ಪ್ರದೇಶದ 25 ಮಂದಿ ಮಹಿಳೆಯರಿಗೆ ಉಚಿತವಾಗಿ ಆಯೋಜಿಸಲಾಗಿದ್ದ ಟ್ಯಾಲಿ ತರಬೇತಿ ಶಿಬಿರ ಪೂರೈಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಸ್ವಸಹಾಯ ಸಂಘ ಸಂಸ್ಥೆಗಳ ನೆರವಿನಿಂದ, ಮಹಿಳೆಯರ ಅರ್ಥಿಕ ಸ್ವಾವಲಂಬನೆ ವೃದ್ಧಿಸುವ ನಿಟ್ಟಿನಲ್ಲಿ ಹಲವು ಉತ್ತಮ ಕೌಶಲ್ಯಾಧಾರಿತ, ಶಿಕ್ಷಣ ಅಧಾರಿತ ತರಬೇತಿ ನೀಡುತ್ತಿದ್ದು ಅವುಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ, ಸ್ವಾಭಿಮಾನ ಜೀವನ ನಡೆಸಬೇಕೆಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಬಹುತೇಕ ತರಬೇತಿ ಸಂಸ್ಥೆಗಳು ಪಟ್ಟಣ ಪ್ರದೇಶವನ್ನು ಕೇಂದ್ರವನ್ನಾಗಿರಿಸಿಕೊಂಡು ತರಬೇತಿ ನೀಡುತ್ತಿವೆ. ಆದರೆ, ಗ್ರಾಮಾಂತರ ಪ್ರದೇಶದ ಮಹಿಳೆಯರೂ ಪ್ರಸ್ತುತ ಜಾಗತೀಕರಣ ಸವಾಲನ್ನು ಮೆಟ್ಟಿ ನಿಲ್ಲಲು ಪೂರಕವಾದಂತಹ ಗಣಕಯಂತ್ರಾಧರಿತ ಹಲವು ತರಬೇತಿಗಳನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಿ, ಅವರನ್ನು ಗಣಕಯಂತ್ರ ಸಾಕ್ಷರರನ್ನಾಗಿಸುವ ಮೂಲಕ ಅವರು ಹಲವು ಉದ್ದಿಮೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ನಿರ್ವಹಣೆಗೆ ಪೂರಕವಾಗುವಂತ ವಾತಾವರಣ ನಿರ್ಮಾಣಕ್ಕೆ ಸಹಕರಿಸಬೇಕೆಂದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿ ಬೆಂಗಳೂರು ಮುಖ್ಯಸ್ಥೆ ಸುಮನಾಗರಾಜ್, ಜಯಲಕ್ಷ್ಮಿ, ಚಿಗುರು ಫೌಂಡೇಷನ್ ಅಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಪುಷ್ಪಲತಾ ಇತರರು ಇದ್ದರು.
ಸಿಡಿದೆದ್ದು ಕೆಲಸ ಮಾಡು: ಗೌರಿಶಂಕರ
ತುಮಕೂರು: ಮಧುಗಿರಿ ಮಾಜಿ ಶಾಸಕ ಗೌರಿಶಂಕರ ಅವರು ಮೌನವಾಗಿದ್ದಾರೆ. ಅದೇನು ತಪಸ್ಸು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಏಕೋ ಅವರು ಚಡಪಡಿಸುತ್ತಿದ್ದಾರೆ. ಏನಾದರೂ ತಪ್ಪಾಗಿದ್ದರೆ ಕ್ಷಮಿಸಪ್ಪ. ಸಿಡಿದೆದ್ದು ಕೆಲಸ ಮಾಡು. ನಿಮ್ಮ ವಂಶದ ಹೆಸರು ಉಳಿಯುತ್ತದೆ ಎಂದು ಸಭೆಯಲ್ಲಿದ್ದ ಗೌರಿಶಂಕರನನ್ನು ಕುರಿತು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.