ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಜೀರ್ ನಿಷ್ಕಳಂಕಿತರು'

Rashmi Kasaragodu
Updated On : 24 Jan 2014, 2:20 am

ಕುಣಿಗಲ್: ರೌಡಿ ಮುನ್ನನ ಗುಂಡಿಗೆ ಬಲಿಯಾದ ಮಲ್ಲಿಕಾರ್ಜುನ ಬಂಡೆ ಹತ್ಯೆ ಪ್ರಕರಣದಲ್ಲಿ ಐಜಿಪಿ ವಜೀರ್ ಅಹಮದ್ ಪಾತ್ರ ಇಲ್ಲ. ಸರ್ಕಾರ ಸಮಗ್ರ ತನಿಖೆ ನಡೆಸಿ ನಿಷ್ಠಾವಂತ ಪೊಲೀಸ್ ಅಧಿಕಾರಿ ಮೇಲೆ ಬಂದಿರುವ ಕಳಂಕವನ್ನು ದೂರ ಮಾಡಬೇಕೆಂದು ಅಮೃತೂರು ಕ್ಷೇಮಾಭಿವೃದ್ಧಿ ಟ್ರಸ್ಟ್ನ ಪದಾಧಿಕಾರಿಗಳು ಬುಧವಾರ ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಕೆ.ಎಸ್.ಮದ್ದೂರಯ್ಯ, ವಜೀರ್ ಅಹಮದ್ ಅಮೃತೂರು ಮೂಲದವರಾಗಿದ್ದು, ಯಾವುದೇ ಒಂದು ವರ್ಗಕ್ಕೆ ಮೀಸಲಾಗದೆ, ಎಲ್ಲ ವರ್ಗದ ಶೈಕ್ಷಣಿಕ, ಸಾಮಾಜಿಕ ಏಳಿಗೆಗೆ ಅಮೃತೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೈಲಾದ ಸೇವೆ ಸಲ್ಲಿಸಿದ್ದಾರೆ. ಧನಸಹಾಯ ನೀಡಿ ಹಲವು ಪ್ರತಿಭಾವಂತರನ್ನು ಪ್ರೋತ್ಸಾಹಿಸಿದ್ದಾರೆ. ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಅವರಿಗೆ ರಾಷ್ಟ್ರಪತಿ ಸೇವಾ ಪದಕ ಸಹ ಲಭಿಸಿದೆ. ವಜೀರ್ ಅಹಮದ್ 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಯಾವುದೇ ಚ್ಯುತಿ ಬಾರದಂತೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇಂತಹ ಉತ್ತಮ ವರ್ಚಸ್ಸು ಹೊಂದಿರುವ ವಜೀರ್ ಅಹಮದ್ ವಿರುದ್ಧ ಇಲಾಖೆ ಸೇರಿದಂತೆ ರಾಜಕೀಯ ರಂಗದಲ್ಲಿ ಚ್ಯುತಿ ತರುವ ನಿಟ್ಟಿನಲ್ಲಿ ಕೆಲ ಪಟ್ಟಭದ್ರ ಶಕ್ತಿಗಳು ಯತ್ನಿಸುತ್ತಿರುವುದು ಖಂಡನೀಯ. ಹಿರಿಯ ಅಧಿಕಾರಿ ವಿರುದ್ಧ ಕೇವಲ ಜಾತಿ ಆಧಾರದ ಮೇಲೆ ನಿರ್ಧರಿಸಿ ಆರೋಪ ಮಾಡುವ ಮನೋಭಾವ ಸಲ್ಲದು. ಸರ್ಕಾರವು ನಿಷ್ಪಕ್ಷಪಾತ ತನಿಖೆ ನಡೆಸಿದಲ್ಲಿ ಅವರು ಎಲ್ಲ ಆರೋಪಗಳಿಂದ ಮುಕ್ತರಾಗಿ ಬರುವುದರಲ್ಲಿ ಅನುಮಾನವಿಲ್ಲ ಎಂದರು. ಖಜಾಂಚಿ ರೇವಣ ಸಿದ್ದಪ್ಪ, ಉಪಾಧ್ಯಕ್ಷ ಸಯದ್ ಜಖಾಉಲ್ಲಾ, ವಿ.ವಿ.ಸತ್ಯನಾರಾಯಣ್, ಜಂಟಿಕಾರ್ಯದರ್ಶಿ ಎ.ಆರ್.ರಾಮಕೃಷ್ಣಪ್ಪ ಇತರರು ಇದ್ದರು.

ಗ್ರಾಮೀಣ ಸೊಗಡಿನ ವಾದ್ಯ ಪರಂಪರೆ ಉಳಿಸೋಣ
 


ಗುಬ್ಬಿ: ಪ್ರಸ್ತುತ ದಿನಗಳಲ್ಲಿ ಆಧುನೀಕರಣದ ಗುಂಗಿನಲ್ಲಿ ಗ್ರಾಮೀಣ ಸೊಗಡಿನ ಪರಂಪರೆಯ ವಾದ್ಯಗಳು ನಶಿಸುತ್ತಿದ್ದು ಅವುಗಳನ್ನು ಉಳಿಸುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವಂತೆ ಪಪಂ ಅಧ್ಯಕ್ಷ ಜಿ.ಡಿ.ಸುರೇಶ್ಗೌಡ ಕರೆ ನೀಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಂಗ ಕಲೆಗೆ ಪ್ರೋತ್ಸಾಹ ಒದಗಿಸುವ ಕಾರ್ಯ ಕಾಲೇಜುಗಳಲ್ಲಿ ನಡೆಯುವುದು ಸೂಕ್ತ ಎಂದರು. ಪ್ರಾಚಾರ್ಯ ಪ್ರೊ. ಎಚ್.ಕುಸುಮ ಮಾತನಾಡಿ, ಯುವಕರ ಪ್ರತಿಭೆಯನ್ನು ಹೊರ ತರಲು ವೇದಿಕೆ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ನಿರಂತರ ನಡೆಯಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವಾದ್ಯ ಪರಿಕರಗಳನ್ನು ನುಡಿಸುವ ಸ್ಪರ್ಧೆ ನಡೆಸಲಾಗುತ್ತದೆ ಎಂದರು. ಪಪಂ ಸದಸ್ಯ ಜಿ.ಸಿ.ನರಸಿಂಹಮೂರ್ತಿ, ಪ್ರೊ. ವೇಣುಗೋಪಾಲ್, ಉಪನ್ಯಾಸಕ ಎಂ.ಗೋವಿಂದರಾಯ ಇದ್ದರು.


ಇಂದು ಪ್ರತಿಭಾಶ್ರೀ ಕಾರ್ಯಕ್ರಮ
ತಿಪಟೂರು: ಪಟ್ಟಣದ ಕಲ್ಪತರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾಶ್ರೀ, ಸಾಂಸ್ಕೃತಿಕ ವೇದಿಕೆ, ಎನ್.ಎಸ್.ಎಸ್. ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲರಾದ ಗೀತಾಲಕ್ಷ್ಮಿ ತಿಳಿಸಿದ್ದಾರೆ. ಕೆವಿಎಸ್ ಅಧ್ಯಕ್ಷ ಎನ್. ಬಸವಯ್ಯ  ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಉಗ್ರನರಸಿಂಹೇಗೌಡ, ಕೆವಿಎಸ್ ಖಜಾಂಚಿ ಬಿ.ಆರ್. ವಿಶ್ವನಾಥ್, ಕಲ್ಪತರು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ಪರಮೇಶ್ವರಪ್ಪ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement