ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಾಮಪತ್ರ ಸಲ್ಲಿಕೆ ಇಂದಿನಿಂದ

Rashmi Kasaragodu
Updated On : 25 Jan 2014, 1:58 am

ಸಂಬಂಧ 25 ರಂದು ಶನಿವಾರ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ. 26 ಭಾನುವಾರ ನಾಮಪತ್ರಗಳ ಪರಿಶೀಲನೆ ಮತ್ತು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ, 27ರ ಸೋಮವಾರ ನಾಮಪತ್ರ ಹಿಂತೆಗೆದುಕೊಳ್ಳುವಿಕೆ ಹಾಗೂ ಅಭ್ಯರ್ಥಿಗಳಿಗೆ ಚಿಹ್ನೆ ನೀಡುವ ಕಾರ್ಯ ನಡೆಯಲಿದೆ. 29 ಬುಧವಾರ ಚಿಹ್ನೆ ಸಹಿತ ಕ್ರಮಬದ್ಧವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸುವುದು ಹಾಗೂ ಫೆ. 2 ಭಾನುವಾರ ಬೆಳಿಗ್ಗೆಯಿಂದ ಸಂಘದ ಆವರಣದಲ್ಲಿ ಮತದಾನ ಕಾರ್ಯ, ಮತ ಏಣಿಕೆ ಮತ್ತು ಫಲಿತಾಂಶ ಘೋಷಣೆ ನಡೆಯಲಿದೆ.
ಬಾಲಭವನದಲ್ಲಿಚಿತ್ರಕಲಾ ಸ್ಪರ್ಧೆ
ತುಮಕೂರು: ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜ.25 ರಂದು ಬೆಳಗ್ಗೆ 8-30 ರಿಂದ 10-30 ರವರೆಗೆ ಚಿತ್ರಕಲಾ ಸ್ಪರ್ಧೆಯನ್ನು ತುಮಕೂರಿನ ಬಾಲಭವನದಲ್ಲಿ ಏರ್ಪಡಿಸಲಾಗಿದೆ. ಮೊದಲು ತಾವು ಎಂಬ ವಿಷಯದ ಬಗ್ಗೆ ನಗರದ ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈ ಸ್ಫರ್ಧೆ ಏರ್ಪಡಿಸಲಾಗಿದ್ದು, ಡ್ರಾಯಿಂಗ್ ಶೀಟ್ ಗಳನ್ನು ಉಚಿತವಾಗಿ ನೀಡಲಾಗುವುದು. ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ತುಮಕೂರು ವಿಜ್ಞಾನ ಕೇಂದ್ರ, ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಈ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ವಿಶ್ವನಾಥ್ ತಿಳಿಸಿದ್ದಾರೆ.
ಇಂದು ವಾಕಥಾನ್ ಕಾರ್ಯಕ್ರಮ
ತುಮಕೂರು: ಧಾನ್ ಪೌಂಡೇಷನ್ ವತಿಯಿಂದ ಜ.25 ರಂದು ಬೆಳಗ್ಗೆ 8-30 ಕ್ಕೆ ಕೃಷಿ ಜೀವ ವೈವಿಧ್ಯತೆ ಹಾಗೂ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಹಾಗೂ ನಶಿಸಿ ಹೋಗುತ್ತಿರುವ ಕಿರು ಧಾನ್ಯಗಳ ಉಳಿವಿಗಾಗಿ ನಡಿಗೆ ಎನ್ನುವ ವಿಷಯದ ಹಿನ್ನೆಲೆಯಲ್ಲಿ ವಾಕಥಾನ್ ಕಾರ್ಯಕ್ರಮ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಡಿಗೆ ಕಾರ್ಯಕ್ರಮದ ನಂತರ 9 ಗಂಟೆಗೆ ಗ್ರಂಥಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ತಹಶೀಲ್ದಾರ್ ನಾಗರಿಕರು ಸೇರಿದಂತೆ ಸುಮಾರು 5000 ಮಂದಿ ಸೇರಲಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement