ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಡಿತರ ಸಮರ್ಪಕ ವಿತರಣೆಯಾಗಲಿ: ತಿಮ್ಮರಾಯಪ್ಪ

Rashmi Kasaragodu
Updated On : 26 Jan 2014, 2:26 am


ಪಾವಗಡ: ಕಡು ಬಡವರಿಗೆ ಸಮರ್ಪಕ ಪಡಿತರ ವಿತರಣೆ ಸೇರಿದಂತೆ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಬದ್ಧರಾಗಿ ಕೆಲಸ ಮಾಡುವಂತೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅಧಿಕಾರಿಗಳಿಗೆ ಎಚ್ಚರಿಸಿದರು.
ಅವರು ಶನಿವಾರ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪಡಿತರ ಚೀಟಿಗಳ ಹಂಚಿಕೆ ಕುರಿತು ಆಹಾರ ಇಲಾಖೆ ಅಧಿಕಾರಿ ನಾರಾಯಣಪ್ಪ ಅವರನ್ನು ಪ್ರಶ್ನಿಸಿದ ಅವರು, ಇಲಾಖೆಗೆ ಪಡಿತರ ಚೀಟಿಗಳ ಗುತ್ತಿಗೆದಾರರ ಕಡೆಯಿಂದ ಸುಮಾರು 13ಸಾವಿರ ಅರ್ಜಿಗಳು ಬಂದಿದ್ದು ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ.ಮುಂದಿನ ವಾರ ಕಾರ್ಡ್ಗಳ ಮುದ್ರಣ ಕಾರ್ಯ ನಡೆಯಲಿದ್ದು, ಕೂಡಲೇ ಆರ್ಹರಿಗೆ ಕಾರ್ಡ್ ವಿತರಿಸುವುದಾಗಿ ನಾರಾಯಣಪ್ಪ ತಿಳಿಸಿದರು.ಪಡಿತರ ಕಾರ್ಡ್ಗಳ ಫೊಟೋ ಮತ್ತು ದಾಖಲಾತಿ ನಿರ್ವಹಿಸುವ ಗುತ್ತಿಗೆ ಪಡೆದ ಪಿಎಲ್ಒಗಳು ಫೋಟೊ ತೆಗಸಿಕೊಳ್ಳಲು ಬರುವ ಪಡಿತರರನ್ನು ವಿನಾ ಕಾರಣ ತಮ್ಮ ಸೆಂಟರ್ ಬಳಿ ಅಲೆಸುವುದು. ಸತಾಯಿಸುವುದು ತಮ್ಮ ಗಮನಕ್ಕೆ ಬಂದಿದ್ದು ಅಲ್ಲದೇ ಪಟ್ಟಿಗೆ ಕಾರ್ಡ್ ಸೇರಿಸುವ ಮತ್ತು ತೆಗೆಯುವ ಅಧಿಕಾರ ಅವರೆ  ಹೊಂದಿದ ಕಾರಣ ಪಡಿತರ ಚೀಟಿ ಪಡೆಯಲು ಆರ್ಹರಿಗೆ ವಂಚನೆ ಆಗುತ್ತಿದೆ ಎಂದ ಶಾಸಕರು ಪಿಎಲ್ಒಗಳು ಖಾಸಗಿ ಅಂಗಡಿಗಳಿಗೆ ಅಧಿಕಾರಿಗಳಿದ್ದ ಹಾಗೇ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮಗಳು ರೂಪಿಸಿ ಕಾರ್ಡ್ ಹಂಚಿಕೆ ಮಾಡಿ ಎಂದು ಆಹಾರ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ತಮ್ಮ ಜೀವನೋಪಾಯಕ್ಕಾಗಿ ವಲಸೆ ಸೇರಿದಂತೆ ಆರ್ಹರ ಕಾರ್ಡ್ಗಳು ತೆಗೆಯದಂತೆ ಎಚ್ಚರ ವಹಿಸಬೇಕೆಂದು ಇಲಾಖೆಯ ಅಧಿಕಾರಿ ನಾರಾಯಣಪ್ಪ ಅವರಿಗೆ ಜಿಪಂ ಸದಸ್ಯ ಆರ್.ಸಿ. ಆಂಜನಪ್ಪ ಎಚ್ಚರಿಸಿದರು.
ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದ ಶಾಸಕರು ಔಷಧಿಗಳ ಸಧುಪಯೋಗ ಸೇರಿದಂತೆ ಆಸ್ಪತ್ರೆಗೆ ಬಂದ ರೋಗಿಗಳ ಬಗ್ಗೆ ಎಚ್ಚರ ವಹಿಸುವಂತೆ ಸರ್ಕಾರಿ ಆರೋಗ್ಯಧಿಕಾರಿ ಡಾ. ಚನ್ನಕೇಶವ ಅವರಿಗೆ ಸೂಚಿಸಿ ಸಮಸ್ಯೆ ಇರುವ ತಿರುಮಣಿ, ವೈ.ಎನ್.ಹೊಸಕೋಟೆ ಹಾಗೂ ಪಾವಗಡ ಸರ್ಕಾರಿ ಆಸ್ಪತ್ರೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಭರವಸೆ ಸಭೆಯಲ್ಲಿ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಆರ್.ಸಿ.ಅಂಜಿನಪ್ಪ, ನಳಿನಮ್ಮ ಗೋವಿಂದಪ್ಪ, ರೇಖಾ ಅಂಜನೇಯಲು,ತಾಪಂ ಅದ್ಯಕ್ಷೆ ರಾಧರಾಜ್ಗೋಪಾಲ್,ತಾ,ಸ್ಥಾಯಿ ಸಮಿತಿ ಅಧ್ಯಕ್ಷ ಮಾರಪ್ಪ,ಉಪಾಧ್ಯಕ್ಷೆ ಪಾರ್ವತಮ್ಮ ಹಾಗೂ ಇಒ ತಿಪ್ಪೇಸಾಮಿ, ಎಇಇ ಆಶೋಕರೆಡ್ಡಿ, ಜಲಾನಯನ ಇಲಾಖೆಯ ಪುಟ್ಟರಂಗಪ್ಪ ವೈ.ಆರ್.ಚೌಧರಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement