ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗಣರಾಜ್ಯೋತ್ಸವ ಎಂದರೆ ರಜೆ ದಿನಅಲ್ಲ: ತಹಸೀಲ್ದಾರ್ ಪುಟ್ಟನರಸಯ್ಯ

Rashmi Kasaragodu
Updated On : 27 Jan 2014, 1:35 am

ಕ.ಪ್ರ.ವಾರ್ತೆ, ಕುಣಿಗಲ್, ಜ.26
ಗಣರಾಜ್ಯೋತ್ಸವ ಎಂದರೆ ಬಹುತೇಕರು ಕೇವಲ ಸರ್ಕಾರಿ ರಜೆ ಎಂದು ಭಾವಿಸಿ, ರಜೆದಿನವನ್ನು ಮೋಜಿನ ರೂಪದಲ್ಲಿ ಕಳೆಯುವಂಥ ಪರಿಪಾಠ ಹೆಚ್ಚುತ್ತಿರುವುದು ವಿಷಾದಕರ ಎಂದು ತಹಸೀಲ್ದಾರ್ ಪುಟ್ಟನರಸಯ್ಯ ತಿಳಿಸಿದರು.
ಭಾನುವಾರ ಪಟ್ಟಣದ ಮಹಾತ್ಮಗಾಂಧಿ ಪ.ಪೂ.ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣೆ ನೆರವೇರಿಸಿ, ಗೌರವವಂದನೆ ಸ್ವೀಕರಿಸಿ ಮಾತನಾಡಿ, ವಿವಿಧೆಡೆ ಹರಿದು ಹಂಚಿಹೋಗಿದ್ದ ಹಲವು ರಾಜ್ಯಗಳನ್ನು ಏಕತೆ ನಿಟ್ಟಿನಲ್ಲಿ ಏಕೀಕರಣಗೊಳಿಸಲು ಹಲವು ಮಹಾನುಭಾವರ ತ್ಯಾಗಬಲಿದಾನಗಳನ್ನು, ಅಖಂಡ ಭಾರತದ ಭವ್ಯ ಪರಂಪರೆ, ಶೌರ್ಯವನ್ನು ಹೆಮ್ಮೆಯಿಂದ ಆಚರಿಸುವ ದಿನವಾದ  ಗಣರಾಜ್ಯೋತ್ಸವನ್ನು ಪ್ರಾಮಾಣಿಕತೆಯಿಂದ ಆಚರಿಸುವಂತಾಗಬೇಕೆಂದರು.
ಶಾಸಕ ಡಿ.ನಾಗರಾಜಯ್ಯ ಅಧ್ಯಕ್ಷತೆವಹಿಸಿ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಗಗಳಾಗಿದ್ದು, ಸಂವಿಧಾನಬದ್ಧವಾಗಿ ವಹಿಸಿರುವ, ವಹಿಸಿ ಕೊಂಡಿರುವ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸುವ ಮೂಲಕ, ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಸುಭದ್ರ ರಾಷ್ಟ್ರನಿರ್ಮಾಣದಲ್ಲಿ ಶ್ರಮಿಸಬೇಕಾಗಿದೆ ಎಂದರು.  
ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸ್ತಬ್ಧಚಿತ್ರ ಪ್ರದರ್ಶನ, ಸಾಮೂಹಿಕ ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾಪಂ ಅಧ್ಯಕ್ಷೆ ತೇಜಸ್ವಿನಿ, ಜಿಪಂ ಸದಸ್ಯ ಅರುಣಕುಮಾರ, ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹರೀಶ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ದಿನೇಶ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement