ಜನ ಸಾಮಾನ್ಯರೆಲ್ಲಾ ಸೇರಿ ಆಚರಿಸುವಂತಾಗಲಿ'
ಹುಳಿಯಾರು: ಗಣರಾಜ್ಯೋತ್ಸವ ಆಚರಣೆ ಎಂಬುದು ಬರಿ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಆಚರಿಸುವುದಲ್ಲ. ಅದನ್ನು ದೇಶದ ಎಲ್ಲಾ ಜನಸಾಮಾನ್ಯರೂ ಒಟ್ಟಾಗಿ ಸೇರಿ ಹಬ್ಬದಂತೆ ಆಚರಿಸುವಂತಾಗಬೇಕು ಎಂದು ಪ್ರಾಂಶುಪಾಲ ನಟರಾಜು ತಿಳಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಧಾರ್ಮಿಕ ಹಬ್ಬಗಳನ್ನು ಯಾವ ರೀತಿ ಜನರು ಒಟ್ಟಾಗಿ ಸಡಗರ ಸಂಭ್ರಮದಿಂದ ಸೇರಿ ಆಚರಿಸುತ್ತಾರೆಯೋ ಅಂತೆಯೇ ರಾಷ್ಟ್ರೀಯ ಹಬ್ಬಗಳನ್ನು ಗ್ರಾಮಗಳ ಜನರು ಒಂದೆಡೆ ಒಟ್ಟಾಗಿ ಸೇರಿ ಹಬ್ಬದ ಸಂಭ್ರಮದಂತೆ ಆಚರಿಸಬೇಕು ಎಂದರು.
ಮುಖಂಡರಾದ ನಂದಿಹಳ್ಳಿ ಶಿವಣ್ಣ ಮಾತನಾಡಿ, ಪ್ರಸ್ತುತ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿರುವುದು ನಾವು ದೇಶಕ್ಕೆ ಅಗೌರವ ಸೂಚಿಸಿದಂತೆ ಎಂದರು. ಕಾಲೇಜು ಹಂತದಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ವಿದ್ಯಾರ್ಥಿಗಳ ಹಾಜರಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ನಮ್ಮದೇಶದ ಭವ್ಯಪರಂಪರೆಯ ಬಗ್ಗೆ ತಿಳಿಸುತ್ತಾ ಪ್ರತೊಯೊಬ್ಬ ಮಗುವು ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕು ಎಂದರು. ಸಂಗೀತ ಶಿಕ್ಷಕ ಸುಭಾಷ್ ಪಾಟಿಲ್ ಅವರ ಸಂಗಡ ಶಾಲಾ ಮಕ್ಕಳು ಸೇರಿ ದೇಶಭಕ್ತಿಗಳನ್ನು ಹಾಡಿದರು.
ಉಪಪ್ರಾಚಾರ್ಯ ಇಂದಿರಾ, ಮುಖಂಡರಾದ ಜಲಾಲ್ ಸಾಬ್, ಗ್ರಾ.ಪಂ.ಉಪಾಧ್ಯಕ್ಷೆ ಅಬುದುನ್ನಿಸಾ, ಕನ್ನಡ ಉಪನ್ಯಾಸಕ ಶಶಿಭೂಷಣ್, ಎಸ್.ಡಿ.ಎಂಸಿ ಸದಸ್ಯರುಗಳು, ಶಿಕ್ಷಕರು, ಪಿಯು ಉಪನ್ಯಾಸಕರು, ಸಿಬ್ಬಂದಿವಗಂದವರು ಉಪಸ್ಥಿತರಿದ್ದರು.